Select Page

ಗುರುವಂದನಾ ‌ಸಮಾರಂಭ ; ಪೂರ್ವಭಾವಿ ಸಭೆ ಆಯೋಜನೆ

ಗುರುವಂದನಾ ‌ಸಮಾರಂಭ ; ಪೂರ್ವಭಾವಿ ಸಭೆ ಆಯೋಜನೆ



ಬೆಳಗಾವಿ : ಅಥಣಿ ತಾಲೂಕಿನ‌ ನದಿ‌ ಇಂಗಳಗಾಂವ ಗ್ರಾಮದ ಸರಕಾರಿ ಪ್ರೌಢಶಾಲೆಯ 2008 ರ ಬ್ಯಾಚಿನ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಿರುವ ಗುರುವಂದನಾ‌ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು.

ತಾಲೂಕಿನ‌ ದರೂರ ಗ್ರಾಮದ ಹೊರವಲಯದಲ್ಲಿ ಗುರುವಾರ ನಡೆದ ಸಭೆಯಲ್ಲಿ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವೇಳೆ ಕಾರ್ಯಕ್ರಮದ ರೂಪುರೇಷೆ ‌ಸೇರಿದಂತೆ ಮಹತ್ವದ ವಿಚಾರವಾಗಿ ಚರ್ಚಿಸಲಾಯಿತು.

18 ವರ್ಷಗಳ ನಂತರ ಹಳೆ ವಿದ್ಯಾರ್ಥಿಗಳು ಒಟ್ಟುಗೂಡಿ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ‌ ಕುರಿತು ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.



ಈ‌ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ಭಾರತಿ ಡಾಬೋಳಿ, ಸುಪ್ರಿಯಾ ಚನಗೌಡರ,‌ ಕವಿತಾ ಮಠಪತಿ ಪೂರ್ಣಿಮಾ ಚನಗೌಡರ, ಸುಧಾ ಚನಗೌಡರ, ಕಸ್ತೂರಿ ಡಾಬೋಳಿ, ಶಕುಂತಲಾ ಸಂತಿ, ಲಕ್ಷ್ಮೀ ಪಾಟೀಲ್, ಶ್ರೀಶೈಲ ಸಾವಂತ್ರಿ, ರಾಜು ಬೆವನೂರ, ವಿನಾಯಕ ಮಠಪತಿ.

ಮೀರಾಸಾಬ್ ಬಡೆ, ಸಿದ್ದು ಮಿರ್ಜಿ, ಸಚೀನ್ ಘೋರ್ಪಡೆ
ಸಂತೋಷ್ ಲಟ್ಟಿ, ಬಸವರಾಜ ಪಾಟೀಲ್, ಮಹಾಂತೇಶ್ ಗಿರಮಲ್ಲಣವರ, ರಮೇಶ್ ಮೊಕಾಶಿ, ಶ್ರವನ ಕಾಂಬಳೆ,
ರಾಜೇಶ್ ಕಾಂಬಳೆ, ಮಹಾಂತೇಶ್ ಮಾಂಗ, ಆನಂದ ಚನಗೌಡರ, ಚೇತನ್ ಯಡೂರು ಉಪಸ್ಥಿತರಿದ್ದರು.



Advertisement

Leave a reply

Your email address will not be published. Required fields are marked *

error: Content is protected !!