Select Page

ಇಂದು ಸಿಎಂ ರಾಜೀನಾಮೆ ಡೌಟ್? ; ಮಹತ್ವದ ಬೆಳವಣಿಗೆ

ಇಂದು ಸಿಎಂ ರಾಜೀನಾಮೆ ಡೌಟ್? ; ಮಹತ್ವದ ಬೆಳವಣಿಗೆ



ಬೆಳಗಾವಿ : ಸಿಎಂ ಸಿದ್ದರಾಮಯ್ಯ ತಮ್ಮ ಮನೆಯಲ್ಲಿ ಇಂದು ಬೆಳಿಗ್ಗೆ ಸಚಿವರಿಗೆ ಉಪಹಾರ ಏರ್ಪಾಡು ಮಾಡಿದ್ದು ಇದಾದ ನಂತರ ನೇರವಾಗಿ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ಸಲ್ಲಿಸುವ ಕಾರ್ಯಕ್ರಮ ನಿಗದಿಯಾಗಿತ್ತು.

ಆದರೆ ಇವೆಲ್ಲದರ ಮಧ್ಯೆ ಮಹತ್ವದ ಬೆಳವಣಿಗೆ ನಡೆದಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದೋರ್ ಗೆ ತೆರಳಿದ್ದಾರೆ. ಪತ್ನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಾಜ್ಯಪಾಲರು ಹೋಗಿರುವುದಾಗಿ ಮಾಹಿತಿ ಬರುತ್ತಿದೆ.

ಇನ್ನೂ ಮಧ್ಯಾಹ್ನದ ವೇಳೆಗೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ. ಆದರೆ ಇಂದು ಸಂಜೆಯೊಳಗೆ ರಾಜ್ಯಪಾಲರು ವಾಪಸ್ ರಾಜ್ಯಕ್ಕೆ ಮರಳುತ್ತಾರಾ ಎಂಬುದು ಸಧ್ಯದ ಕುತೂಹಲ.

ಇನ್ನೂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದು ಕಾಯುತ್ತಿದ್ದ ಅನೇಕರಿಗೆ ನಿರಾಸೆಯಾಗಿದೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕುರಿತು ಹತ್ತಾರು ಅನುಮಾನ ಹುಟ್ಟುಹಾಕಿದ್ದಂತು ನಿಜ.

Advertisement
error: Content is protected !!