Select Page

ಈ ವಾರವೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ; ಡಿಕೆಶಿ ಥಮ್ಸ್ ಅಪ್ ಸೀಕ್ರೆಟ್ ಏನು..?

ಈ ವಾರವೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ; ಡಿಕೆಶಿ ಥಮ್ಸ್ ಅಪ್ ಸೀಕ್ರೆಟ್ ಏನು..?



ದೆಹಲಿ : ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ವರಿಷ್ಠರು (Congress Highcommand) ನೀಡಿದ್ದಾರೆಯಾದ ರಾಜ್ಯಸಭೆ (Rajyasabha) ಆಫರ್ ಕೇವಲ ಪ್ರಸಾಪವಾಗಿ ಉಳಿದಿಲ್ಲ, ಬದಲಿಗೆ ಅದೆಷ್ಟೊಂದು ಕಬ್ಬಿಣದ ಕಡವನ್ನೂ ನಿಗಧಿಪಡಿಸಲಾಗಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಈ ಹಿನ್ನಲೆಯಲ್ಲಿ ಈ ವಾರವೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಎಂಬ ಪ್ರಶ್ನೆ ರಾಜ್ಯದ ಎಲ್ಲೆಡೆ ಎದ್ದಿದೆ.

ಹೈಕಮಾಂಡ್‌ಗೆ ಶರಣಾದ್ರಾ ಸಿದ್ದು? : ಕೇಂದ್ರ ಚುನಾವಣಾ ಆಯೋಗ ಘೋಷಿಸಿರುವ ವೇಳಾಪಟ್ಟಿಯ ಪ್ರಕಾರ, ಜೂನ್ 18ರಿಂದ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದೆ. ಹೀಗಾಗಿ, ಹೈಕಮಾಂಡ್ ನೀಡಿರುವ ಆಫರ್ ಅನ್ನು ಒಪ್ಪಿಕೊಂಡು ದೆಹಲಿ ರಾಜಕಾರಣಕ್ಕೆ ಪ್ರವೇಶಿಸುವ ಕುರಿತು ಸಿದ್ದರಾಮಯ್ಯ ಅವರು ಜೂನ್ 1ರ ಒಳಗಾಗಿಯೇ ತಮ್ಮ ಅಂತಿಮ ನಿರ್ಧಾರವನ್ನು ವರಿಷ್ಠರಿಗೆ ತಿಳಿಸಬೇಕಿದೆ.

ನಿರಂತರವಾಗಿ ಕುರ್ಚಿ ಉಳಿಸಿಕೊಳ್ಳುತ್ತಾ ಬಂದಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಹೈಕಮಾಂಡ್‌ನ ಗಟ್ಟಿ ನಿಲುವಿಗೆ ಸೋತು ಶರಣಾಗಿದ್ದಾರಾ ಮತ್ತು ತಮ್ಮ ಆಪ್ತರೊಂದಿಗೆ ರಾಜೀನಾಮೆಯ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಿದ್ದಾರಾ ಎಂಬ ಅನುಮಾನಗಳು ದಟ್ಟವಾಗಿವೆ.

ಮೂರು ದಿನಗಳಲ್ಲಿ ರಾಜೀನಾಮೆ ಸಾಧ್ಯತೆ? : ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ಸಭೆಗಳ ನಂತರವೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಮೂಲಕಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವಯುತವಾಗಿ ಸ್ಥಾನ ಬಿಟ್ಟುಕೊಡುವಂತೆ ಸೂಚಿಸಲಾಗಿದ್ದು, ಅವರಿಗೆ ರಾಜ್ಯಸಭಾ ಸ್ಥಾನವದ ಆಫರ್ ನೀಡಲಾಗಿದೆ.

ಈ ಪ್ರಸ್ತಾಪದ ಬಗ್ಗೆ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಹೈಕಮಾಂಡ್ ಬಳಿ ಸ್ಪಷ್ಟ ಸಮಯ ಕೇಳಿದ್ದಾರೆ ಎನ್ನಲಾಗಿದೆ. ಆದಾಗ್ಯೂ ಮುಂದಿನ ಎರಡು ಅಥವಾ ಮೂರು ದಿನಗಳ ಒಳಗಾಗಿ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಡಿಕೆಶಿ ‘ಧಮ್ಸ್ ಅಪ್’ ಸೀಕ್ರೆಟ್ : ಇದೇ ವೇಳೆ, ದೆಹಲಿ ಸಭೆ ಮುಗಿಸಿ ಹೊರಬರುವಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲಿಫ್ಟ್‌ನಲ್ಲಿ ಮಾಧ್ಯಮಗಳಿಗೆ ನೋಡಿದ ಥಮ್ಸ್ ಅಪ್ (Thumbs Up) ಸಂಕೇತ ತೋರಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ಥಮ್ಸ್ ಅಪ್ ಹಿಂದೆ ದೆಹಲಿಯಿಂದ ಸಿಕ್ಕಿರುವ ಸಿಎಂ ಕುರ್ಚಿಯ ಗ್ರೀನ್ ಸಿಗ್ನಲ್ ಅಡಗಿದೆಯೇ? ಡಿಕೆಶಿ ಸಿಎಂ ಕುರ್ಚಿಗೆ ಏರುವ ದಿನ ಅತ್ಯಂತ ಹತ್ತಿರ ಬಂದಿದೆದೇ? ಎಂಬ ಚರ್ಚೆಗಳು ರಾಜ್ಯಕಲ್ಲೇ ಸಂಚಲನ ಮೂಡಿಸಿವೆ. ದೆಹಲಿಯಿಂದ ಡಿಕೆಶಿ ತಮ್ಮ ಬಳಗಕ್ಕೆ ‘ಗುಡ್ ನ್ಯೂಸ್’ ಹೊತ್ತು ತರುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.

ಹೈಕಮಾಂಡ್ ಮುಂದಿನ ನಡೆ ಏನು? ಒಂದೊಮ್ಮೆ ಜೂನ್ 8ರ ಒಳಗಾಗಿ ಸಿದ್ದರಾಮಯ್ಯ ಅವರು ರಾಜ್ಯಸಭೆ ಆಫರ್ ಒಪ್ಪಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಮ್ಮತಿಸಿದರೆ, ಹೈಕಮಾಂಡ್ ಮುಂದಿನ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಹೇಗೆ ನಿಭಾಯಿಸಲಿದೆ. ಸಿದ್ದರಾಮಯ್ಯ ತಮ್ಮ ನಿಧಾರರ ಪ್ರಕಟಿಸಿದ ಕ್ಷಣವೇ ದೆಹಲಿ ನಾಯಕರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲಿದೆ.

Advertisement

Leave a reply

Your email address will not be published. Required fields are marked *

error: Content is protected !!