ಶಿವಾನಂದ ನೀಲಣ್ಣನವರ ನಿಂದ ಐಷಾರಾಮಿ ಕಾರು ಗಿಫ್ಟ್ ; ಕರವೇ ಜಿಲ್ಲಾಧ್ಯಕ್ಷನಿಗೆ ಸಿಐಡಿ ನೋಟಿಸ್
ಬೆಳಗಾವಿ : ಶಿವಂ ಅಸೋಸಿಯೇಟ್ಸ್ ಮಾಲಿಕ ಶಿವಾನಂದ ನೀಲಣ್ಣನವರ ಕಡೆಯಿಂದ ಕೋಟಿ ಬೆಲೆಯ ಕಾರ್ ಅನ್ನು ಗಿಫ್ಟ್ ಪಡೆದಿರುವ ಅನುಮಾನದ ಮೇಲೆ ಕರವೇ ಜಿಲ್ಲಾಧ್ಯಕ್ಷನಿಗೆ ಸಿಐಡಿ ನೋಟಿಸ್ ಜಾರಿ ಮಾಡಿದೆ.
ಈ ಹಿಂದೆ ಬೆಳಗಾವಿ ಉತ್ಸವ ಹೆಸರಿನಲ್ಲಿ ಸಿನೆಮಾ ಹಬ್ಬ ಆಚರಣೆ ಮಾಡಲಾಗಿತ್ತು. ಈ ವೇಳೆ ಕರವೇ ( ಪ್ರವೀಣ್ ಶೆಟ್ಟಿ ಬಣದ ) ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಎಂಬುವವರು ಶಿವಾನಂದ ನೀಲಣ್ಣನವರ ಕಡೆಯಿಂದ ಕೋಟಿ ಬೆಲೆಯ ಕಾರು ಗಿಫ್ಟ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಜನಸಾಮಾನ್ಯರಿಗೆ ಸೇರಿದ್ದ ಹಣದಲ್ಲಿ ಈ ರೀತಿ ಉಡುಗೊರೆ ನೀಡಿದ್ದು ಹಾಗೂ ಪಡೆದವರ ಮಾಹಿತಿ ಕಲೆಹಾಕಿರುವ ಸಿಐಡಿ ಸಧ್ಯ ನೋಟಿಸ್ ಜಾರಿ ಮಾಡಿದೆ. ಹೆಚ್ಚಿನ ತನಿಖೆ ಹಿನ್ನೆಲೆಯಲ್ಲಿ ಕಾರನ್ನು ಸಿಐಡಿ ಕಚೇರಿಗೆ ತರುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

