ಅಥಣಿ : ಬಸ್ ನಿಲ್ದಾಣದಲ್ಲಿ ಬಂಗಾರದ ಆಭರಣ ಕದಿಯುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳಿಯರನ್ನು ಬಂಧಿಸುವಲ್ಲಿ ಅಥಣಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲ್ಹಾಪುರದ ಹೇಮಾ ಕಸಬೇಕರ್, ನೀಲಂ ಕಾಂಬಳೆ ಬಂಧಿತ ಆರೋಪಿಗಳು. ಕಳೆದ ಮಾರ್ಚ್ ನಲ್ಲಿ ಅಥಣಿ ಬಸ್ ನಿಲ್ದಾಣದಲ್ಲಿ ಬಂಗಾರದ ಆಭರಣ ಕಳ್ಳತನ ಮಾಡಿದ್ದರು.
ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.