ಬೆಳಗಾವಿ : ಸಹಕಾರ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಶಿವಂ ಅಸೋಸಿಯೇಟ್ಸ್ ಮಾಲಿಕ ಶಿವಾನಂದ ನೀಲಣ್ಣನವರ ಬಂಧನ ಮಾಡಲಾಗಿದೆ.
ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣನವರ ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಬೆಳಗಾವಿ ಉಪ ವಿಭಾಗಾಧಿಕಾರಿ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ 35 ಸಾವಿರ ಜನರಿಗೆ 4,500 ಕೋಟಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ ಎಂದು ಕೇಳಿಬಂದಿದೆ. ಇವರ ಸಂಪೂರ್ಣ ವ್ಯವಹಾರ Online ನಲ್ಲಿ ಇತ್ತು ಎಂದು ಹೇಳಲಾಗುತ್ತಿದೆ.
ನಿನ್ನೆಯಿಂದ ಶಿವಾನಂದ ನೀಲಣ್ಣನವರ ಅವರ ಕಚೇರಿ ಹಾಗೂ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು ಪ್ಲಾಟ್ ಹಾಗೂ ಮೂರು ಕಚೇರಿ ಸೀಸ್ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತರು ಪ್ರಕರದ ಕುರಿತು ಮಾಹಿತಿ ನೀಡಿದ್ದು, 35 ಸಾವಿರ ಜನರಿಂದ ಈತ ಹಣ ಪಡೆದಿದ್ದು ಬಡ್ಸ್೯ ಆ್ಯಕ್ಟ್ ಹಾಗೂ ಸಿಪಿಐಡಿ ಸೆಕ್ಷನ್ 80 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದರು.
BREAKING – ವಂಚನೆ ಪ್ರಕರಣ ; ಕೊನೆಗೂ ಶಿವಾನಂದ ನೀಲಣ್ಣನವರ ಬಂಧನ



