Select Page

ಅನ್ಯಾಯ ಮಾಡಿದರೆ ಮೆಟ್ಟಿನಿಂದ ಹೊಡೆಯುವೆ ; ಪರೋಕ್ಷವಾಗಿ ಜಾರಕಿಹೊಳಿಗೆ ಸವದಿ ಎಚ್ಚರಿಕೆ..!

ಅನ್ಯಾಯ ಮಾಡಿದರೆ ಮೆಟ್ಟಿನಿಂದ ಹೊಡೆಯುವೆ ; ಪರೋಕ್ಷವಾಗಿ ಜಾರಕಿಹೊಳಿಗೆ ಸವದಿ ಎಚ್ಚರಿಕೆ..!



ಅಥಣಿ : ನನ್ನನ್ನು ಟ್ರ್ಯಾಕ್ಟರ್ ಹೊಡೆಯಲು ಕಳುಹಿಸುತ್ತೇನೆ ಎಂದು ಒಬ್ಬ ಪ್ರೀತಿಯ ಸ್ನೇಹಿತ ಹೇಳಿದ್ದಾನೆ.‌ ನಾನು ರೈತನ ಮಗ ಎಲ್ಲದಕ್ಕೂ ಸಿದ್ಧ, ಪ್ರಸಂಗ ಬಂದರೆ ಮೆಟ್ಟಿನಿಂದ ಹೊಡೆಯುತ್ತೇನೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಟಾಂಗ್ ಕೊಟ್ಟಿದ್ದಾರೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಲಕ್ಷ್ಮಣ ಸವದಿ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ನನಗೆ ಒಬ್ಬ ಸ್ನೇಹಿತ ಟ್ರ್ಯಾಕ್ಟರ್ ಹೊಡೆಯಲು ಕಳುಹಿಸುತ್ತೇನೆ ಎಂದು ಹೇಳುತ್ತಾನೆ. ನಾನು ರೈತನ ಮಗ ಎಲ್ಲವನ್ನೂ ಮಾಡಯತ್ತೇನೆ, ಎತ್ತಿನ ಗಾಡಿಯನ್ನು ಹೊಡೆಯುತ್ತೇನೆ, ಪ್ರಸಂಗ ಬಂದರೆ ಅನ್ಯಾಯ ಮಾಡಲು ಬಂದವರನ್ನು ಮೆಟ್ಟಿನಿಂದ ಹೊಡೆಯುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ. ಶಿವಯೋಗಿ ನಾಡಿನಲ್ಲಿ ಅನ್ಯಾಯ ನಡೆಯುವುದಿಲ‌. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ಲಕ್ಷ್ಮಣ ಸವದಿ ಪರೋಕ್ಷವಾಗಿ ತಮ್ಮ ರಾಜಕೀಯ ಎದುರಾಳಿ ರಮೇಶ್ ಕಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.

ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಲಕ್ಷ್ಮಣ ಸವದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಆದರೆ ಈ ಬಾರಿ ಲಕ್ಷ್ಮಣ ಸವದಿ ಹೇಳಿಕೆ ಮುಖಾಂತರ ಇನ್ನಷ್ಟು ನಾಲಿಗೆ ಹರಿತಗೊಳಿಸಿದ್ದಾರೆ.


Advertisement

Leave a reply

Your email address will not be published. Required fields are marked *

error: Content is protected !!