ಬೆಳಗಾವಿ : ಉತ್ತರ ವಲಯದ ನೂತನ ಐಜಿಪಿಯಾಗಿ ಹಿರಿಯ IPS ಅಧಿಕಾರಿ ಸಂದೀಪ್ ಪಾಟೀಲ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಚೇತನ್ ಸಿಂಗ್ ರಾಥೋಡ್ ಅವರನ್ನು‌ ವರ್ಗಾವಣೆ ಮಾಡಲಾಗಿದ್ದು ಇವರಿಂದ ತೆರವಾದ ಸ್ಥಾನಕ್ಕೆ ಸಂದೀಪ್ ಪಾಟೀಲ್ ಅವರ‌ನ್ನು ನೇಮಿಸಲಾಗಿದೆ.

ಈ ಹಿಂದೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸಂದೀಪ್ ಪಾಟೀಲ್ ಅವರು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.