Select Page

Advertisement

ಬೆಳಗಾವಿಯಲ್ಲಿ ತಡರಾತ್ರಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ..!

ಬೆಳಗಾವಿಯಲ್ಲಿ ತಡರಾತ್ರಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ..!



ಬೆಳಗಾವಿ : ಬೆಳಗಾವಿಯಲ್ಲಿ ವಕೀಲೆಯ ಮನೆ ಮೇಲೆ ಮಂಡೋಳಿ ರಸ್ತೆಯಲ್ಲಿ ಇರುವ ಪೂಜಾ ಕಾಕತಕರ್ ಮನೆ ಮೇಲೆ ದಾಳಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶನಿವಾರ ರಾತ್ರಿ 1ರಿಂದ 2 ಗಂಟೆಯ ಸುಮಾರಿನಲ್ಲಿ ದುಷ್ಕರ್ಮಿಗಳಿಂದ ದಾಳಿ ನಡೆದಿದೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ದಾಳಿ ಮಾಡಿದ್ದು ಕಿಟಕಿ ಗಾಜು ಒಡೆದುಹೋಗಿದೆ.

ಘಟನಾ ಸ್ಥಳಕ್ಕೆ ಸುಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪೂಜಾ, ನಾನು ವೃತ್ತಿಯಲ್ಲಿ ವಕೀಲೆ ಕೆಲ ಕೇಸ್ ಗಳನ್ನು ನಡೆಸುತ್ತಿದ್ದೇನೆ. ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ನನ್ನ ಮಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೂಜಾ ಕಾಕತ್ಕರ್ ಹೇಳಿದರು.

ಗುಂಡು ತುಗುಲಿರೋ ಗ್ಲಾಸ್ ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕಳೆದ 18 ವರ್ಷಗಳಿಂದ ವಕೀಲೆ ವೃತ್ತಿ ಮಾಡುತ್ತಿರೋ ನಾನು ಹೈ ಪ್ರೊಫೈಲ್ ಕೇಸ್ ಪರ ವಾದ ಮಾಡುತ್ತಿದ್ದೇನೆ. ಈಗಾಗಲೇ ರಕ್ಷಣೆ ನೀಡುವ ಭರವಸೆ ನೀಡಿರುವ ಪೊಲೀಸರು ಎಫ್ ಎಸ್ ಎಲ್ ವರದಿಗಾಗಿ ಕಾಯುತ್ತಿರುವೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!