Select Page

Advertisement

ಕನ್ಹೇರಿ ಶ್ರೀಗಳ ಅನಾಗರಿಕ ವರ್ತನೆ ನೋವಿನ ಸಂಗತಿ ; ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ

ಕನ್ಹೇರಿ ಶ್ರೀಗಳ ಅನಾಗರಿಕ ವರ್ತನೆ ನೋವಿನ ಸಂಗತಿ ; ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ


ಬೆಳಗಾವಿ : ಸುಳ್ಳು ಆರೋಪ ಮಾಡುತ್ತ ಕನ್ಹೇರಿ‌ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ‌ ಮಾಡುತ್ತಿದ್ದಾರೆ. ಈಗಾಗಲೇ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪದೇ, ಪದೇ ಅನಾಗರಿಕ ವರ್ತನೆ ತೋರುತ್ತಿರುವುದು ನೋವಿನ ಸಂಗತಿ ಎಂದು ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಾಗಲಕೋಟೆಯ ರಬಕವಿ-ಬನಹಟ್ಟಿಯಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು ನಮ್ಮ ಹೆಸರನ್ನು ಉಲ್ಲೇಖಿಸಿ ಮಾಡಿರುವ ಆರೋಪಕ್ಕೆ ಈ ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಲಾಗಿದೆ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದ್ದಾರೆ.

ಒಬ್ಬ ಸ್ವಾಮಿ ಎಂಬ ಏಕವಚನದ ಶಬ್ದದಿಂದ ಆರಂಭವಾಗುವ ಅವರ ಮಾತುಗಳಲ್ಲಿ ನಾವು ಮರಾಠಿ ಭಾಷೆಯ ಕುರಾನ್ ಅನ್ನು ಕನ್ನಡಕ್ಕೆ ಅನುವಾದಿಸಿ ನಮ್ಮ ಮಠದಿಂದಲೇ ಪ್ರಕಟಿಸಿ ಹಂಚಿರುವುದಾಗಿ ಹಾಗೂ ಭಗವದ್ಗೀತೆಯನ್ನು ನಿಂದಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ನಾವು
ಅನುವಾದಿಸಿರುವುದು ಹಿಂದೂಧರ್ಮದ ಶ್ರೇಷ್ಠ ಸಂತ ವಿನೋಬಾ ಭಾವೆ ಅವರ “ಇಸ್ಲಾಂ ಧರ್ಮ ಸಂದೇಶ” ಎಂಬ ಹಿಂದೀ ಭಾಷೆಯ ಕೃತಿ. ಅದು ಕುರಾನ್ ಅಲ್ಲ. ಮರಾಠಿ ಭಾಷೆಯ ಕೃತಿಯೂ ಅಲ್ಲ. ಅದನ್ನು ನಮ್ಮ ಮಠದಿಂದ ನಾವು ಪ್ರಕಟಿಸಿಯೂ ಇಲ್ಲ. ಆದರೂ ಅವರು ಸುಳ್ಳು ಆರೋಪ ಮಾಡಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಈ ಕೃತಿಯನ್ನು ಪೂಜ್ಯಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ ಎಂದರು.

ನಾವು ಅನುವಾದಿಸಿರುವುದು ಹಿಂದೂಧರ್ಮದ ಶ್ರೇಷ್ಠ
ಸಂತರಾದ ವಿನೋಬಾ ಭಾವೆ ಅವರ “ಇಸ್ಲಾಂ ಧರ್ಮ ಸಂದೇಶ” ಎಂಬ ಹಿಂದೀ ಭಾಷೆಯ ಕೃತಿ. ಜೊತೆಗೆ ಭಗವದ್ಗೀತೆಗೆ ನಾವು ನಿಂದಿಸಿದ್ದೇವೆ ಎಂದು ಹೇಳುತ್ತಾರೆ. ಆ ರೀತಿ ಮಾತನಾಡಿರುವ ಒಂದು ಆಧಾರ ಇದ್ದರೆ ತೋರಿಸಲಿ.
ಸುಳ್ಳು ಆರೋಪ‌ ಮಾಡುವ ಮೂಲಕ ಒಂದು ಧರ್ಮವನ್ನು ‌ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ದ್ವೇಷ ಹರಡುವುದಾಗಿದೆ. ಇದು ಮೂರನೇ ಬಾರಿಗೆ ಚಾರಿತ್ರ್ಯಹರಣ ಮಾಡುವ ಕೆಲಸ ಮಾಡಿದ್ದಾರೆ ಎಂದರು.

ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. “ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆಯನ್ನು ರೂಢಿಸಿಕೊಂಡಿರುವ ನಾವು ಯಾವುದೇ ಧರ್ಮ-ದೇವರು ಮತ್ತು ಭಗವದ್ಗೀತೆಯನ್ನು ಎಂದೂ ನಿಂದಿಸಿರುವುದಿಲ್ಲ. ನಿಂದಿಸಿದ್ದೇವೆ ಎಂಬುದು ಅವರ ಸಣ್ಣ ಬುದ್ದಿಯ ಸುಳ್ಳು ಆರೋಪವಾಗಿದೆ. ಅನಾಗರಿಕ ಭಾಷೆಯಲ್ಲಿ ಎಲ್ಲಾ ಸ್ವಾಮಿಗಳನ್ನು ಸಾಮೂಹಿಕವಾಗಿ ನಿಂದಿಸುವ ಮೂಲಕ ಅವರು ಏನು ಸಾಧಿಸಲಿದ್ದಾರೆ ಎಂಬುದು ಅರ್ಥವಾಗದ ಮಾತು ಎಂದು ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.

ಪದೇ ಪದೇ ಮಠದ ಸಮಸ್ತ ಸದ್ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡಿದ್ದೇವೆ. ಅವರು ಮಾಡಿದ ಸುಳ್ಳು ಆರೋಪಗಳನ್ನೇ ಜನರು ನಿಜವೆಂದು ಭಾವಿಸಬಾರದು ಎಂಬ ಕಾರಣಕ್ಕೆ ಮತ್ತು ಶ್ರೀಮಠದ ಸಮಸ್ತ ಸದ್ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡಿದ್ದೇವೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

************

ನಮ್ಮ ಮಠದ ಪರವಾಗಿ ಭಾರತೀಯ ತತ್ತ್ವಶಾಸ್ತ್ರ ಕೃತಿಯಲ್ಲಿ ಡಾ. ಚಂದ್ರಧರ ಶರ್ಮಾ ಅವರ ಭಗವದ್ಗೀತೆಯ ಭಾಗವನ್ನು ಸುಂದರವಾಗಿ ಅನುವಾದಿಸಿ ಕೊಟ್ಟಿದ್ದೇವೆ. ಇದೂ ಅಲ್ಲದೆ ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳು ರಚಿಸಿದ ಭಗವದ್ಗೀತಾ ಪ್ರವಚನದ ಕರಡು ಪ್ರತಿಯನ್ನು ಶ್ರದ್ಧೆಯಿಂದ ತಿದ್ದಿಕೊಟ್ಟಿದ್ದೇವೆ.

ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು
ಡಂಬಳ-ಗದಗ ತೋಂಟದಾರ್ಯ ಮಠ


***************


Advertisement

Leave a reply

Your email address will not be published. Required fields are marked *

error: Content is protected !!