Select Page

Advertisement

ಕಲ್ಮೇಶನಿಗೆ ಚಟ್ಟ ಕಟ್ಟಿದ ಕಸ್ತೂರಿ ; ತಂದೆಯ ಮರ್ಮಾಂಗ ಕತ್ತರಿಸಲು ಸುಪಾರಿ‌ ಕೊಟ್ಟನಾ ಐನಾತಿ ಪುತ್ರ..!

ಕಲ್ಮೇಶನಿಗೆ ಚಟ್ಟ ಕಟ್ಟಿದ ಕಸ್ತೂರಿ ; ತಂದೆಯ ಮರ್ಮಾಂಗ ಕತ್ತರಿಸಲು ಸುಪಾರಿ‌ ಕೊಟ್ಟನಾ ಐನಾತಿ ಪುತ್ರ..!


ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಜಮೀನು ಒಂದರಲ್ಲಿ ವ್ಯಕ್ತೊಯೋರ್ವನ ಮರ್ಮಾಂಗ ಕತ್ತರಿಸಿ ಭೀಕರ ಕೊಲೆ ಮಾಡಿದ್ದ ಪ್ರಕರಣದ ಹಿಂದಿನ ಸ್ಪೋಟಕ ಸತ್ಯ ಬಯಲಾಗಿದೆ.

ಕಲ್ಮೇಶ ಕೋಟಿ (50) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಧ್ಯ ಈ ಕೊಲೆ ಹಿಂದಿನ ಅಸಲಿ ಸತ್ಯ ಬಯಲಿಗೆಳೆಯುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿತರು ಪತ್ನಿ ಹಾಗೂ ಪುತ್ರ ಎಂಬುದು ತಿಳಿದುಬಂದಿದೆ.

ಪತಿಯ ಹೆಸರಿನ ಆಸ್ತಿ ಕಬಳಿಸುವ ಉದ್ದೇಶದಿಂದ ಪತ್ನಿ ಕಸ್ತೂರಿ ಕೋಟಿ ಹಾಗೂ ಪುತ್ರ ಕಿರಣ ಕೋಟಿ ಸೇರಿಕೊಂಡು ಕಲ್ಮೇಶನಿಗೆ ಚಟ್ಟ ಕಟ್ಟಿದ್ದಾರೆ. ಇನ್ನೂ ಈ ಕೊಲೆ ಮಾಡಿದ್ದು ಮಹೇಶ ಅಂಬಣ್ಣವರ ಹಾಗೂ ಮುದಕಪ್ಪ ಕೊಳೆಕರ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.



ಆಸ್ತಿ ವಿಚಾರಕ್ಕೆ ಪತಿಯನ್ನೇ ಕೊಂದು ಆತನ ಮರ್ಮಾಂಗ ‌ಕತ್ತರಿಸುವ ಸೇಡು ಯಾವ ಮಟ್ಟಿಗೆ ಕಸ್ತೂರಿಯಲ್ಲಿ ಅಡಗಿತ್ತು ಎಂಬುದು ಈ ಪ್ರಕರಣದಿಂದ ತಿಳಿದುಬರುತ್ತದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಕಿತ್ತೂರು ಠಾಣೆ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!