ಬೆಳಗಾವಿ : ರೈತರಿಗೆ ಸಾಲ ಕೊಡುವುದರಿಂದ ಬಿಡಿಸಿಸಿ ಬ್ಯಾಂಕಿಗೆ ನಷ್ಟ ಉಂಟಾಗುತ್ತದೆ ಎಂದು ಹೇಳಿಕೆ‌ ನೀಡಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೆಬ್ ಜೊಲ್ಲೆ ಕೊನೆಗೂ ರೈತರ ಕ್ಷಮೆ ಕೇಳಿದ್ದಾರೆ.

ರಾಮದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು. ಪತ್ರಿಕಾಗೋಷ್ಠಿ ವೇಳೆ ನಾನು ಬಿಡಿಸಿಸಿ ಬ್ಯಾಂಕ್ ಸಾಲದ ಕುರಿತು ಮಾತನಾಡಿದ್ದೇನೆ.‌ ಇದರಿಂದ ರೈತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಅಣ್ಣಾಸಾಹೆಬ್ ಜೊಲ್ಲೆ ಹೇಳಿದ್ದಾರೆ.

ಜೊಲ್ಲೆ ಹೇಳಿಕೆಗೆ ಜಿಲ್ಲೆಯಾದ್ಯಂತ ರೈತರು ಆಕ್ರೋಶ ಹೊರಹಾಕಿದ್ದರು. ಸ್ವತಃ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ರೈತರಿಗೆ ಸಾಲ ಕೊಡಲೇಬೇಕು ಎಂದು ಹೇಳುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.