ಸಮಾಜ ಸೇವೆಯಲ್ಲೇ ಸರ್ವಸ್ವ ಕಂಡ ಅಮೀತ್ ರಜಪೂತ…!
ಬೆಳಗಾವಿ ವಾಯ್ಸ್ : ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದು ಬ್ಯಾಂಕಿಂಗ್ ವಲಯದಲ್ಲಿ ಸೇವೆ ಸಲ್ಲಿಸುತ್ತಾ ತನ್ನ ಪಾಡಿಗೆ ತಾನು ಸುಖಮಯ ಬದುಕು ಸಾಗಿಸಬೇಕಿದ್ದ ಯುವಕನೋರ್ವ, ಸಾಮಾಜಿಕ ಸೇವೆಗಳ ಮೂಲಕ ಜನರ ಪಾಲಿನ ಆಪದ್ಬಾಂಧವನಾಗಿ ಸುಂದರ ಬದುಕು ಕಟ್ಟಿಕೊಂಡ ಉತ್ಸಾಹಿ ಯುವಕನ ಕಥೆ ಇದು.
ಹೌದು ಬೆಳಗಾವಿ ನಗರ ನಿವಾಸಿಗಳಾದ ಪರಶುರಾಮ ಹಾಗೂ ಶಶಿಕಲಾ ಅವರ ಏಕೈಕ ಸುಪುತ್ರ ಅಮೀತ್ ರಜಪೂತ ಅವರು ಐಇಎಮ್ಎಸ್ – ಬಿ ಸ್ಕೂಲ್ ನಲ್ಲಿ ಎಂಬಿಎ ಪದವಿ ಪಡೆದು ಸುಮಾರು ಆರು ವರ್ಷಗಳ ಕಾಲ ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡಿದ್ದಾರೆ. ಸಮಾಜಸೇವೆ ಮಾಡಬೇಕು ಎಂಬ ತುಡಿತ ಹೊಂದಿದ್ದ ಇವರು ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಮಾಜಪರವಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಹೊರ ಜಗತ್ತಿನ ಜನರ ಸಮಸ್ಯೆಗೆ ಧ್ವನಿಯಾಗುವ ಮೂಲಕ ಜನಪರ ಕಾರ್ಯಗಳಿಂದ ತೃಪ್ತಿಕರ ಬದುಕು ಸಾಗಿಸುವ ಅಪರೂಪದ ವ್ಯಕ್ತಿತ್ವ ಅಮೀತ್ ರಜಪೂತ ಅವರದು. ಯಾರೇ ಬಂದು ಸಹಾಯ ಕೇಳಿದರೂ ಇವರ ಕಡೆಯಿಂದ ಯಾವತ್ತೂ ಆಗುವುದಿಲ್ಲ ಎಂಬ ಉತ್ತರ ಬಂದಿದ್ದು ತುಂಬಾ ವಿರಳ. ಆರೋಗ್ಯ ಸಮಸ್ಯೆ, ಸರಕಾರಿ ಕಚೇರಿ ಕೆಲಸ, ಸಾರ್ವಜನಿಕ ಸಮಸ್ಯೆ ಸೇರಿದಂತೆ ಜನರ ಜೊತೆ ನಿಂತು ಮಾಡುವ ಅಪರೂಪದ ಗುಣವನ್ನು ಅಮೀತ್ ರಜಪೂತ ಅವರು ಅಳವಡಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಕುರಿತು ಒಲವು : ಬಾಲ್ಯದಿಂದಲೂ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಂದ ಆಕರ್ಷಿತರಾದ ಅಮೀತ್ ರಜಪೂತ ಅವರು ತಮ್ಮ 22 ನೇ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಪ್ರಾರಂಭಿಸಿದರು. ಬೆಳಗಾವಿ ದಕ್ಷಿಣ ಮತಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ಪಕ್ಷದ ಪರವಾಗಿ ನಿರಂತರ ಕೆಲಸ ಮಾಡುತ್ತಾ ಬಂದಿದ್ದಾರೆ. ಈವರೆಗೂ ಅವರು ಪಕ್ಷ ನೀಡಿರುವ ಪ್ರತಿಯೊಂದೂ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತಿರುವುದು ಇವರ ಇನ್ನೊಂದು ವಿಶೇಷ.

ಕಾಂಗ್ರೆಸ್ ಪಕ್ಷದಲ್ಲಿ ನಿರಂತರ ಸೇವೆ : ಕಾಂಗ್ರೆಸ್ ಪಕ್ಷ ನೀಡುವ ಪ್ರತಿಯೊಂದು ಜವಾಬ್ದಾರಿಯನ್ನು ಅಮೀತ್ ರಜಪೂತ ಅವರು ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದಾರೆ. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಪಕ್ಷದ ಚಟುವಟಿಕೆಗಳನ್ನು ಮುಂದುವರಿಸಿದ್ದು ಇದರಿಂದ ಸಂಘಟನೆ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗಿದೆ. ಇದೇ ಕಾರಣಕ್ಕೆ ನಾಯಕರು ಹಲವಾರು ಅವಕಾಶ ಕಲ್ಪಿಸುವ ಮೂಲಕ ಇವರ ಕೆಲಸವನ್ನು ಮೆಚ್ಚಿದ್ದು ಇನ್ನೂಂದು ವಿಶೇಷ.
ಅಧಿಕಾರಿಗಳ ಜೊತೆ ಉತ್ತಮ ಒಡನಾಟ : ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಯಾವ ಸಂದರ್ಭದಲ್ಲಿ ಎಂತಹ ಸಮಸ್ಯೆ ಬರುತ್ತವೆ ಎಂದು ಹೇಳಲಾಗದು. ಈ ಕಾರಣಕ್ಕೆ ಅಧಿಕಾರಿ ವಲಯದಲ್ಲಿ ಅಮೀತ್ ರಜಪೂತ ಅವರ ಕುರಿತು ಉತ್ತಮ ನಂಬಿಕೆ ಇದೆ. ಜೊತೆಗೆ ಬಡವರ ಪರ ಯಾವುದೇ ಕೆಲಸ ಬಂದರೂ ಅದನ್ನು ಚಾಚೂ ತಪ್ಪದೆ ಮಾಡುವ ಇವರು ಈ ವೇಳೆ ಅಧಿಕಾರಿಗಳ ಜೊತೆಗಿನ ತಮ್ಮ ಒಡನಾಟವೂ ಬಡವರಿಗೆ ಸಹಕಾರಿಯಾಗಿದೆ.
30 ರ ಸಂಭ್ರಮದಲ್ಲಿ ಅಮೀತ್ ರಜಪೂತ : ಡಿಸೆಂಬರ್ 29 ಕ್ಕೆ ಅಮೀತ್ ಅವರು ತಮ್ಮ 30 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದಾಕಾಲವೂ ಜನಪರ ಕಾರ್ಯಗಳ ಮೂಲಕ ಸಮಾಜ ಸೇವೆಯನ್ನು ತಮ್ಮ ಸರ್ವಸ್ವ ಎಂದು ನಂಬಿರುವ ಅಪರೂಪ ವ್ಯಕ್ತಿ ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುದು ನಾಡಿನ ಜನರ ಆಶಯ. ಅಷ್ಟೇ ಅಲ್ಲದೆ ಇವರ ತಂದೆ, ತಾಯಿ, ಗುರು – ಹಿರಿಯರು ಹಾಗೆಯೆ ಗುರು ಪರಂಪರೆಯ ಆಶಿರ್ವಾದ ಸದಾಕಾಲವೂ ಇವರ ಮೇಲಿರಲಿ ಎಂಬುದು ಎಲ್ಲರ ಆಶಯ.
**************
ಸಾಹುಕಾರರ ಕುಟುಂಬದ ಮೇಲೆ ವಿಶೇಷ ಪ್ರೀತಿ
ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿರುವ ಅಮೀತ್ ರಜಪೂತ ಅವರಿಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಅಗಾಧವಾದ ಪ್ರೀತಿ. ಸಾಹುಕಾರರ ಸರಳತೆ ಹಾಗೂ ಬಡವರಿಗೆ ಸಹಾಯ ಮಾಡುವ ಗುಣಕ್ಕೆ ಪ್ರಭಾವಿತರಾದ ಅಮೀತ್ ರಜಪೂತ ಅವರು ಸತೀಶ್ ಜಾರಕಿಹೊಳಿ ಅವರು ಎದುರಿಸುವ ಪ್ರತಿಯೊಂದು ಚುನಾವಣೆಯಲ್ಲಿಯೂ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಲೋಕಸಭಾ ಚುನಾವಣೆ ವೇಳೆಯೂ ನಿರಂತರ ಶ್ರಮವಹಿಸಿದ್ದು ಅಮೀತ್ ಅವರ ಶ್ರಮಕ್ಕೆ ಹಿಡಿದ ಕನ್ನಡಿ.
*********************


