Ramadurga : ಕುರಿ ಮೇಯಿಸುತ್ತಾ ಕಾಲುವೆಗೆ ಇಳಿದಿದ್ದ ಬಾಲಕರು ನೀರುಪಾಲು..!
ಬೆಳಗಾವಿ : ತಂದೆಯ ಜೊತೆ ಕುರಿ ಕಾಯುತ್ತಾ ಹೋದ ವೇಳೆ ಕಾಲುವೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ನಡೆದಿದೆ.
ಹಣಮಂತ ದುರ್ಗಪ್ಪ ಹಗೇದ (10) ಬಸವರಾಜ ರಮೇಶ ಸೋಮಣ್ಣವರ (10) ಮೃತಪಟ್ಟ ಬಾಲಕರು. ತಂದೆ ಹಣಮಂತ ಜೊತೆ ಕುರಿ ಕಾಯಲು ಹೋಗಿದ್ದ ಹಣಮಂತ ಹಾಗೂ ಗೆಳೆಯ ಬಸವರಾಜ ಕಾಲುವೆಗೆ ಈಜಲು ತೆರಳಿದ್ದರು.
ಮಕ್ಕಳು ಎಲ್ಲಿ ಎಂದು ನೋಡಿದ ಸಂದರ್ಭದಲ್ಲಿ ಕಾಲುವೆ ಬಳಿ ಬಾಲಕರ ಬಟ್ಟೆ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


