Select Page

Advertisement

ದರ್ಶನ್ ಡೆವಿಲ್ ಹೊಸ ದಾಖಲೆ, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ?

ದರ್ಶನ್ ಡೆವಿಲ್ ಹೊಸ ದಾಖಲೆ, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಕನ್ನಡ ಚಿತ್ರರಂಗದ ಪಾಲಿಗೆ ಹಬ್ಬ. ಗುರುವಾರ ರಿಲೀಸ್ ಆಗಿರುವ ದಿ ಡೆವಿಲ್ ಕೂಡ ದೊಡ್ಡ ಮಟ್ಟದಲ್ಲೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣದಿಂದಲೇ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ.

ಮೂಲಗಳ ಪ್ರಕಾರ ದಿ ಡೆವಿಲ್ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 13.8ಕೋಟಿ ಎನ್ನಲಾಗಿದೆ.

ಕನ್ನಡದ ಸಿನಿಮಾಗಳ ಪಾಲಿಗೆ ಒಂದೇ ದಿನಕ್ಕೆ 13 ಕೋಟಿ ರೂಪಾಯಿ ಗಳಿಕೆ ಮಾಡಿರುವುದು ದಾಖಲೆಯ ವಿಷಯವೇ ಸರಿ. ಒಂದು ರೀತಿಯಲ್ಲಿ ಇದಕ್ಕೆ ಟಿಕೆಟ್ ಬೆಲೆ ಕೂಡ ಕಾರಣ ಎನ್ನಬಹುದು. ಪಿವಿಆರ್, ಐನಾಕ್ಸ್​​ ಮೊದಲಾದ ಮಲ್ಟಿಪ್ಲೆಕ್ಸ್​ ಚಿತ್ರ ಮಂದಿರಗಳಲ್ಲಿ ಟಿಕೆಟ್ ದರ 500 ರೂಪಾಯಿಗಳಿಂದಲೇ ಆರಂಭ ಎನ್ನುವ ಹಾಗಿತ್ತು. ಸಿಂಗಲ್ ಥೀಯೇಟರ್ ಗಳಲ್ಲಿ 400 ರೂಪಾಯಿ ವರೆಗೂ ಟಿಕೆಟ್ ದರ ಇತ್ತು. ಇದರಿಂದಾಗಿಯೇ ದೊಡ್ಡ ಮಟ್ಟದ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

ಪ್ಯಾನ್ ಇಂಡಿಯನ್ ಸಿನಿಮಾಗಳ ಸಿನಿಮಾ ಬಗ್ಗೆ ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ನಿರೀಕ್ಷೆ ಮಾಡಿತ್ತು. ಆದರೆ ಚಿತ್ರ ಕರ್ನಾಟಕದಲ್ಲಿ ದಾಖಲೆಯ ಸನಿಹಕ್ಕೆ ‘ಡೆವಿಲ್’ ಚಿತ್ರ ಬಂದು ಸೇರುತ್ತಿದೆ. ಆದರೆ ದರ್ಶನ್ ಅವರ ಹಿಂದಿನ ದಾಖಲೆಯ ಕಲೆಕ್ಷನ್ ಆಗಿರುವ ರಾಬರ್ಟ್ ಚಿತ್ರದ ಮೊದಲ ದಿನದ ಗಳಿಕೆಯನ್ನು ಮುರಿದಿದೆ ಹೀಗಾಗಿ ದರ್ಶನ್ ಹೆಸರಲ್ಲಿ ಡೆವಿಲ್ ಹೊಸ ದಾಖಲೆ ಬರೆದಿದೆ.

Advertisement

Leave a reply

Your email address will not be published. Required fields are marked *

error: Content is protected !!