ಅಥಣಿ : ಬೇವಿನ ಮರಕ್ಕೆ ನೇಣಿಗೆ ಶರಣಾದ ಯುವಕ ; 3 ಹೆಣ್ಣುಮಕ್ಕಳು ಅನಾಥ..!
ಅಥಣಿ : ಸಾಲಬಾದೆ ಮನನೊಂದು ರೈತ ನೇಣಿಗೆ ಶರಣಾದ ಘಟನೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕಾಂತೇಶ ಪಾಂಡು ಕುಂಬಾರ(35) ನೇಣಿಗೆ ಶರಣಾದ ಯುವ ರೈತ ಎಂದು ಗುರುತಿಸಿಲಾಗಿದೆ.
ಗ್ರಾಮದ ಹೊರವಯದ ಕುಂಬಾರ ತೋಟದ ಗಣೇಶ ಗುಡಿ ಹತ್ತಿರ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಕಾಂತೇಶ ಸುಮಾರು ದಿನಗಳಿಂದ ಸಾಲಬಾದೆಯಿಂದ ಮಾನಸಿಕವಾಗಿ ನೊಂದಿದ್ದರು.
ರಾಷ್ಟ್ರೀಕೃತ ಬ್ಯಾಂಕ, ಫೈನಾನ್ಸ್, ಸಹಕಾರಿ ಬ್ಯಾಂಕ, ಸಂಘ ಸಂಸ್ಥೆ ಬ್ಯಾಂಕುಗಳಲ್ಲಿ ಒಟ್ಟು15 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಕಾಂತೇಶ ಗೆ ಪತ್ನಿ, 3 ಜನ ಹೆಣ್ಣು ಮಕ್ಕಳಿದ್ದಾರೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


