ಎಂಇಎಸ್ ಪುಂಡನ ಜೊತೆ ಸೆಲ್ಫಿ ಪಡೆದಿದ್ದ ಇನ್ಸ್ಪೆಕ್ಟರ್ ಎತ್ತಂಗಡಿ…!
ಬೆಳಗಾವಿ : ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಎಂಇಎಸ್ ಮುಖಂಡನ ಜೊತೆ ಸೆಲ್ಫಿ ಪಡೆಯುವ ಮೂಲಕ ವಿವಾದಕ್ಕೆ ಕಾರಣರಾಗಿದ್ದ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಸಿಪಿಐ ಜೆ.ಎಂ.ಕಾಲೆಮಿರ್ಚಿ ಅವರಿಂದ ತೆರವಾದ ಸ್ಥಾನಕ್ಕೆ ನಗರದ ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್ ಗಡ್ಡೇಕರ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.


