ಒಳಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ಖಂಡಿಸಿ ಬೃಹತ್ ಪ್ರತಿಭಟನೆ
ಬೆಳಗಾವಿ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅವೈಜ್ಞಾನಿಕ ಒಳಮೀಸಲಾತಿ ಹಂಚಿಕೆ ಖಂಡಿಸಿ ಬರುವ ಸೆ.4 ರಂದು ಬೆಳಗಾವಿಯಲ್ಲಿ ಹಾಗೂ ಸೆಪ್ಟೆಂಬರ್ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಗೋರ ಮೇಳಾವಾ ರಾಜ್ಯ ಉಪಾಧ್ಯಕ್ಷ ಮಂಜುನಾಥ ಪಮ್ಮಾರ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಜಾತಿ ಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ಖಂಡಿಸಿ ಬಂಜಾರಾ, ಭೋವಿ, ಕೊರಚ, ಕೊರವ, ಸಮಾಜದಿಂದ ಬೃಹತ್ ಸಮಾವೇಶ ನಡೆಯಲಿದೆ. ಒಳಮೀಸಲಾತಿಯಲ್ಲಿನ ದೊಷಪೂರಿತ ದತ್ತಾಂಶ ಪರಿಗಣಿಸಿ ಜಾತಿ ಮೀಸಲಾತಿ ಅವೈಜ್ಞಾನಿಕವಾಗಿ ವರ್ಗೀಕರಿಸಲಾಗಿದೆ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಬಂಜಾರಾ, ಕೊರಮ, ಭೋವಿ, ಕೊರಚ ಸಮಾಜಗಳಿಗೆ 4.5 ರಷ್ಟು ಮೀಸಲಾತಿ ಘೊಷಣೆ ಮಾಡಿತ್ತು. ಆದರೆ ಕಾಂಗ್ರೇಸ್ ಸರ್ಕಾರ ಒಟ್ಟು 63 ಸಮುದಾಗಳನ್ನು ಸೇರಿಸಿ ಶೇಕಡಾ 5 ರಷ್ಟು ಮೀಸಲಾತಿ ಘೋಷಣೆ ಮಾಡಿದೆ. ಇದು ಘೋರವಾದ ಅನ್ಯಾಯ. ಮೀಸಲಾತಿ ವರ್ಗೀಕರಣ ಕುರಿತು ಸುಪ್ರಿಂ ಕೋರ್ಟ್ ಆದೇಶದಂತೆ ಸೂಕ್ತ ಮಾನದಂಡಗಳನ್ನು ರೂಪಿಸಬೇಕು. ಜಾತಿವಾರು ಸ್ಥಿತಿಗತಿಗಳನ್ನು ಸಮೀಕ್ಷೆ ಹಾಗೂ ಗಣತಿ ನಡೆಸಬೇಕು.
ಬರುವ ನಾಲ್ಕರಂದು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲಿದ್ದೆವೆ. 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲಿದ್ದೆವೆ. ಸಹೋದರ ಸಮುದಾಯಗಳ ಓಲೈಕೆಗೆ ಸಿದ್ದರಾಮಯ್ಯ ಸರ್ಕಾರ ಹೀಗೆ ಮಾಡಿದೆ. ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡುತ್ತೆವೆ ಎಂದು ಹೇಳಿದರು.
ಈ ವೇಳೆ ಭೋವಿ ಸಮಾಜದ ಮುಖಂಡ ಸುನೀಲ ಧೊತರೆ, ಬೆಳಗಾವಿ ಮಹಾನಗರ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ ರಾಠೋಡ, ಬಂಜಾರ ಸಮಾಜದ ಮುಖಂಡರಾದ ಎಂ ಟಿ ರಾಠೋಡ್, ಬಿಪಿ ಲಮಾಣಿ, ದೆವೇಂದ್ರ ನಾಯಕ, ಸುರೇಶ್ ಲಮಾಣಿ, ರಾಜು ರಾಠೋಡ್, ಅನೀಲ್ ರಾಠೋಡ್, ಗೋವಿಂದ ಲಮಾಣಿ ಲೋಕೇಶ ರಾಠೋಡ್, ಶಿವನಂದ ಚವ್ಹಾನ, ರವಿ ಲಮಾಣಿ ಇದ್ದರು.


