ಬೆಳಗಾವಿ : ಗಾಂಜಾ ವೀರರು ಪೊಲೀಸ್ ಬಲೆಗೆ ; ಎಪಿಎಂಸಿ ಪೊಲೀಸರ ಭರ್ಜರಿ ಕಾರ್ಯಾಚರಣೆ
ಬೆಳಗಾವಿ : ಡ್ರಗ್ಸ್ ವಿರುದ್ಧ ಸಮರ ಸಾರಿರುವ ಬೆಳಗಾವಿ ನಗರ ಪೊಲೀಸರು ಗಲ್ಲಿ, ಗಲ್ಲಿಗಳಲ್ಲಿ ಅಡಗಿರುವ ಗಾಂಜಾ ಸೇವನೆ ಹಾಗೂ ಮಾರಾಟಗಾರರನ್ನು ಹಿಡಿದು ಒಳಹಾಕುವ ಕೆಲಸ ಮಾಡುತ್ತಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ಸುಮಾರು 50 ಕೆಜಿ ಗಾಂಜಾ ವಶಕ್ಕೆ ಪಡೆದ ಪ್ರಕರಣದ ಬೆನ್ನಲ್ಲೇ ಬೆಳಗಾವಿ ನಗರದಲ್ಲಿ ಗಾಂಜಾ ಸೇವಿಸುತ್ತಿದ್ದ ಆರೋಪದ ಮೇಲೆ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಪಿಎಂಸಿ ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿಗಳಾದ, ರಾಹುಲ್ ಜಾಧವ್, ಅಹ್ಮದ್ ಸನದಿ, ತೌಫಿಕ್ ಗೋರಿಖಾನ್, ಸದ್ದಾಂ ಬೇಪಾರಿ, ಬಿನ್ಯಾಮಿನ್ ಪಠಾಣ, ಇನಾಯತ್ ಧಾರವಾಡಕರ್, ಧಸ್ತಗಿರ ರತಾರವಾಲೆ, ಮಾಳಮಾರುತಿ ಪೊಲೀಸ್ ಠಾಣೆಯಿಂದ ಅಖ್ತರ ಶೇಖ್ ಬಂಧಿಸಲಾಗಿದೆ.
ಎಪಿಎಂಸಿ ಪಿಎಸ್ಐ ಎಸ್.ಆರ್ ಮುತ್ತತ್ತಿ ಹಾಗೂ ಮಾಳಮಾರುತಿ ಠಾಣೆ ಪಿಎಸ್ಐ ಶ್ರೀಶೈಲ ಹಲಗೇರಿ ಸೇರಿದಂತೆ ಸಿಬ್ಬಂದಿಗಳ ಕಾರ್ಯವನ್ನು ನಗರ ಪೊಲೀಸರು ಶ್ಲಾಘಿಸಿದ್ದಾರೆ.


