ಧರ್ಮಸ್ಥಳ ಸುತ್ತ ಶವ ಹೂತಿಟ್ಟ ಪ್ರಕರಣ ; SIT ತಂಡ ರಚಿಸಿ ತನಿಖೆಗೆ ಆದೇಶ
ಬೆಂಗಳೂರು : ಧರ್ಮಸ್ಥಳ ಸುತ್ತ ಅನೇಕ ಶವಗಳನ್ನು ಹೂತಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಜ್ಯ ಸರಕಾರ ತನಿಖೆಹೆ ಎಸ್ಐಟಿ ತಂಡ ರಚಿಸಿ ಆದೇಶ ಹೊರಡಿಸಿದೆ.
ಈ ತನಿಖಾ ತಂಡದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳು ಇದ್ದಾರೆ. ಡಾ. ಪ್ರಣವ್ ಮೊಹಾಂತಿ, ಎಮ್, ಎನ್ ಅನುಚೇತ,
ಸೌಮ್ಯಲತ ಹಾಗೂ ಜಿತೇಂದ್ರ ಕುಮಾರ್ ದಯಾಮ್ ಅವರನ್ನು ಒಳಗೊಂಡ ಎಸ್ಐಟಿ ತಂಡ ರಚನೆಯಾಗಿದೆ
ಧರ್ಮಸ್ಥಳದಲ್ಲಿ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಈ ತನಿಖಾ ತಂಡ ತನಿಖೆ ನಡೆಸಿ ನಂತರ ಪೊಲೀಸ್ ಮಹಾ ನಿರ್ದೇಶಕರಿಗೆ ವರದಿ ನೀಡುವ ಜವಾಬ್ದಾರಿ ವಹಿಸಲಾಗಿದೆ.
ಏನಿದು ಪ್ರಕರಣ : ಮುಸುಕುದಾರಿ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೋರ್ಟ್ ಗೆ ಶುಕ್ರವಾರ ಆಗಮಿಸಿ ಶವಗಳ ಅವಶೇಷಗಳನ್ನು ಬ್ಯಾಗ್ ನಲ್ಲಿ ಹಿಡಿದುಕೊಂಡು ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟಿದ್ದಾನೆ.
ಈ ವ್ಯಕ್ತಿ ಯಾರೆದಂದೆ. ಕಳೆದ ಕೆಲ ದಿನಗಳ ಹಿಂದೆ ವ್ಯಕ್ತಿಯೋರ್ವ ವಕೀಲರ ಮೂಲಕ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಬಳಿ ಧರ್ಮಸ್ಥಳ ಸುತ್ತಮುತ್ತ ನೂರಕ್ಕೂ ಅಧಿಕ ಅನಾಥ ಶವಗಳನ್ನು ಹೂತು ಹಾಕಿರುವುದಾಗಿ, ಈಗ ನನಗೆ ಪಾಪ ಪ್ರಜ್ಞೆ ಮೂಡಿರುವುದಾಗಿ ಹೇಳಿದ್ದ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ವ್ಯಕ್ತಿ ಶುಕ್ರವಾರ ಬೆಳ್ತಂಗಡಿ ನ್ಯಾಯಾದೀಶರ ಮುಂದೆ ಹಾಜರಾದ ವ್ಯಕ್ತಿಯಿಂದ ಹೇಳಿಕೆ ಪಡೆಯಲಾಗಿದೆ. ನಂತರ ಆತನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಆ ವ್ಯಕ್ತಿ ತಂದ ಮಾನವನ ಶರೀರದ ತಲೆಬುರುಡೆ ಹಾಗೂ ಕೆಲ ಅಂಗಾಂಗಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಮುಂದೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಹಾಜರುಪಡಿಸಲಾಗಿದೆ.
ಧರ್ಮಸ್ಥಳ ಸಂಸ್ಥೆಯೊಂದರಲ್ಲಿ ಈ ವ್ಯಕ್ತಿ 1998 ರಿಂದ 2014 ರ ವರೆಗೆ ಸ್ವಚ್ಛತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ. ಈ ವೇಳೆ ನೂರಾರು ಶವಗಳನ್ನು ಮೇಲಿನವರ ಸೂಚನೆಯಂತೆ ಗುಂಡಿ ತೋಡಿ ಹೂತು ಹಾಕಿರುವೆ. ನನಗೆ ಜೀವ ಬೆದರಿಕೆ ಬಂದ ಹಿನ್ನಲೆಯಲ್ಲಿ ತಲೆಮರೆಸಿಕೊಂಡಿದ್ದೆ. ಈ ಪಾಪ ಪ್ರಜ್ಞೆ ಮೂಡಿರುವ ಕಾರಣಕ್ಕೆ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾನೆ.


