ಲಕ್ಷ ಜನ ಸೇರಿಸುವ ಶಕ್ತಿ ಇದೆ ; ಕತ್ತಿಗೆ ಸಾಹುಕಾರ್ ತಿರುಗೇಟು!
ಹುಕ್ಕೇರಿ : ಲಕ್ಷಾಂತರ ಜನ ಸೇರಿಸಿ ಸಮಾವೇಶ ಮಾಡಿದ್ದೇವೆ. ಸಮಯ ಬಂದಾಗ ಉತ್ತರಿಸುತ್ತೇನೆ. ಈಗ ಅವಸರ ಇಲ್ಲ ಎಂದು ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ತಾಲೂಕಿನ ನಿಡಸೋಶಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೊರಗಿನವರನ್ನು ಹುಕ್ಕೇರಿಯಲ್ಲಿ ಬಿಟ್ಟುಕೊಳ್ಳಲ್ಲ ಎಂಬ ರಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇವರು.
ಸಮಯ ಬಂದಾಗ ಹೇಳುತ್ತೇವೆ. ಹುಕ್ಕೇರಿ ಮತಕ್ಷೇತ್ರದಲ್ಲಿ ಸಮಾವೇಶ ಮಾಡುವದಿಲ್ಲ.
ಸಮಾವೇಶದ ಮೇಲೆ ಭರವಸೆ ಇಲ್ಲ. 5 ಲಕ್ಷ ಜನರನ್ನ ನಾವು ಸೇರಿಸಿದ್ದೇವೆ, ನಿನ್ನೆ ನಡೆದ ಸಮಾವೇಶದಲ್ಲಿ 2 ಸಾವಿರ ಜನ ಇದ್ದರು.ಜನ ಕೂಡಿಸುವದು ನಮಗೆ ಹೊಸದೇನಲ್ಲ.ಕತ್ತಿ ಕುಟುಂಬಕ್ಕೆ ಅರ್ಜಂಟ್ ಇದ್ದಷ್ಟು ನನಗೆ ಇಲ್ಲ ಎಂದರು.
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದಲ್ಲಿ ನೌಕರರ ಖಾಯಮಾತಿ ನಾವು ಮಾಡಿದ್ದೇವೆ. ಸಚಿವ ಸತೀಶ ಜಾರಕಿಹೊಳಿ ಅವರು ಈಗ ಬಂದು ಆದೇಶ ಪತ್ರ ನೀಡಿ ಫೋಸ್ ಕೊಟ್ಟಿದ್ದಾರೆ ಎನ್ನುವ ಮಾಜಿ ಅಧ್ಯಕ್ಷ ಕಲಗೌಡ ಪಾಟೀಲ ಆರೋಪಕ್ಕೆ ತಿರುಗೇಟು ನೀಡಿದ ಸತೀಶ್.
ಪೋಸ್ ಕೊಡುವ ಅವಶ್ಯಕತೆ ನಮಗೆ ಇಲ್ಲ. ಪೋಸ್ ಕೊಡುವ ಕಲೆ ನಮ್ಮಲಿಲ್ಲ. ನಾನು ಆಯುರ್ವೇದಿಕ ಡಾಕ್ಟರ್ ಇದ್ದ ಹಾಗೆ ನಮ್ಮದು ಸ್ಲೋ ಇರುತ್ತೆ ಎಂದು ತಿರುಗೇಟು ನೀಡಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೋಶಿ ದುರದುಂಡೇಶ್ವರ ಮಠದಲ್ಲಿ ಪೀಠಾಧಿಪತಿ ಪಂಚಮ ಶಿವಲಿಂಗೇಶ್ವರ ಶ್ರೀಗಳ ಜೊತೆಗೆ ಗೌಪ್ಯ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಕತ್ತಿ ಸವಾಲಿಗೆ ತಿರುಗೇಟು ನೀಡಿದ್ದಾರೆ.


