ಅಥಣಿ : ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದು ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ಬೆವನೂರ ಕ್ರಾಸ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
ನೂರ್ ಸಿರಾಜ್ ಮುಲ್ಲಾ (45) ಮೃತ ದುರ್ದೈವಿ. ಮಲಾಬಾದ ಗ್ರಾಮದ ಈತ ಅಥಣಿಯಿಂದ ಬರುತ್ತಿದ್ದ ಬಸ್ ಗೆ ಬೆಳ್ಳಿಗೇರಿ ಮಲಾಬಾದ ಮಧ್ಯೆ ಡಿಕ್ಕಿ ಹೊಡೆದಿದ್ದು ವ್ಯಕ್ತಿ ಸ್ಥಳದಲ್ಲೇ ಸಾವಣಪ್ಪಿದ್ದಾನೆ.
ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮಿರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಥಣಿ : ಭೀಕರ ರಸ್ತೆ ಅಪಘಾತ, ಓರ್ವ ಸಾವು ಇಬ್ಬರು ಗಂಭೀರ



