ಬೆಳಗಾವಿ : ಜಮೀನವೊಂದರಲ್ಲಿ ಯುವಕನೋರ್ವನನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಬಳಿ ನಡೆದಿದೆ.
ಕಣಗಲಾ ಗ್ರಾಮದ ಹದ್ದಿನ ಜಮೀನನಲ್ಲಿ ಯುವಕನ ಹತ್ಯೆ ಮಾಡಿ ಎಸೆಯಲಾದ ಮೃತದೇಹ ದೊರೆತಿದ್ದು, ಸುದ್ದಿ ತಿಳಿದ ಸಂಕೇಶ್ವರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.