ಅಥಣಿ – ಪ್ರೀತಿ ಹಿಂದೆ ಬಿದ್ದವನು ನೇಣಿಗೆ ಶರಣು ; ಕೊಲೆ ಶಂಕೆ
ಅಥಣಿ : ಯುವತಿಯನ್ನು ಪ್ರೀತಿಸಿ ಊರೂರು ಅಲೆದಿದ್ದು ನಂತರ ಕಾನೂನು ಸಂಘರ್ಷಕ್ಕೆ ಸಿಲುಕಿ ಯುವಕ ನೇಣು ಬಿಗಿದುಕೊಂಡಿದ್ದು ಸಾವಿನ ಕಾರಣ ಈವರೆಗೂ ತಿಳಿದುಬಂದಿಲ್ಲ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದ ಗಣೇಶ ರಾಜು ಶಿವಪೂಜೆ (22) ಮೃತಪಟ್ಟ ಯುವಕ. ಜೂನ್ 19 ರಂದು ಖಿಳೆಗಾಂವ ಸಮೀಪದ ಮಹಾರಾಷ್ಟ್ರದ ಕವಟೆ ಮಹಾಕಾಳ ತಾಲೂಕಿನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ತಾನು ಪ್ರೀತಿಸುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಯುವಕ ಪರಾರಿಯಾಗಿದ್ದ. ನಂತರ ಬಾಲಕಿಯ ಪೋಷಕರು ಅಪಹರಣ ಪ್ರಕರಣ ದಾಖಲಿಸಿದ್ದರು. ನಂತರ ಯುವಕ ಅಪ್ರಾಪ್ತ ಬಾಲಕಿಯನ್ನು ಅವರ ಮನೆಗೆ ತಂದು ಬಿಟ್ಟಿದ್ದ.
ಇಷ್ಟೆಲ್ಲ ಘಟನೆ ನಂತರ ಸಧ್ಯ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಘಡನೆ ನಡೆದು 20 ದಿನ ಕಳೆದರೂ ಈವರೆಗೂ ಯುವಕನ ಸಾವು ಕೊಲೆಯೋ ಅಥವಾ ಆತ್ಮಹತ್ಯೆ ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಪ್ರೀತಿಯ ಹಿಂದೆ ಬಿದ್ದವನು ಸಧ್ಯ ಚಟ್ಟ ಏರಿದ್ದಾನೆ.


