ಮತ್ತೆ ಕಿಂಗ್ ಮೇಕರ್ ಆದ ಗೋಕಾಕ್ ಸಾಹುಕಾರ ; ಮೂರು ಪಕ್ಷಕ್ಕೂ ಅನಿವಾರ್ಯವಾಯ್ತು ಒಂದು ಮತ
ಬೆಂಗಳೂರು : ಸಧ್ಯ ರಾಜ್ಯ ರಾಜಕಾರಣದಲ್ಲಿ ಬಹುಕೇಂದ್ರಿತ ವ್ಯಕ್ತಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಾಗಿದ್ದಾರೆ. ಸಧ್ಯ ಎಲ್ಲರ ಚಿತ್ತ ಗೋಕಾಕ್ ಸಾಹುಕಾರರ ಮೇಲೆ ನೆಟ್ಡಿದೆ.
ಕಾರಣ ಏನೆಂದರೆ ರಾಜ್ಯದ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಸರಕಾರ ನಾಲ್ವರು ನಾಮನಿರ್ದೇಶಿತರನ್ನು ಘೋಷಣೆ ಮಾಡಲಾಗಿದೆ. ಸಿದ್ದರಾಮಯ್ಯ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮುಟ್ಟು, ಎನ್ ಆರ್ ಐ ಪೋರಂ ಉಪಾಧ್ಯೆ ಆರತಿ ಕೃಷ್ಣ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಸುರೇಶ್ ಬಾಬು, ದಲಿತ ಮುಖಂಡ ಸಾಗರ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಮೇಲಿನ ನಾಲ್ವರು ಪ್ರಮಾಣವಚನ ಪಡೆದುಕೊಂಡರೆ ಪ್ರಸ್ತುತ 75 ಸದಸ್ಯ ಬಲದ ಪರಿಷತ್ ನಲ್ಲಿ ಕಾಂಗ್ರೆಸ್ 37ಕ್ಕೆ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲಿದೆ. ಸಧ್ಯ ಪರಿಷತ್ ನಲ್ಲಿ ಸಭಾಪತಿ ಹುದ್ದೆಗೆ 37 ಕ್ಕೂ ಅಧಿಕರ ಸ್ಥಾನ ಪಡೆಯಬೇಕು. ಸ್ವತಂತ್ರ ಸದಸ್ಯರಾಗಿರುವ ಲಖನ್ ಜಾರಕಿಹೊಳಿ ಅವರ ಮತ ನಿರ್ಣಾಯಕವಾಗಲಿದೆ.
ಒಂದುವೇಳೆ ಕಾಂಗ್ರೆಸ್ ಪರವಾಗಿ ಲಖನ್ ಜಾರಕಿಹೊಳಿ ಮತ ನೀಡಿದರೆ ಮುಂದೆ ಬಿಜೆಪಿ ಹಿಡಿತದಲ್ಲಿರುವ ವಿಧಾನ ಪರಿಷತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನ ಕಾಂಗ್ರೆಸ್ ನತ್ತ ಜಾರಲಿದೆ. ಇಲ್ಲವಾದರೆ ಲಖನ್ ಜಾರಕಿಹೊಳಿ ಬಿಜೆಪಿ ಗಾಗೂ ಜೆಡಿಎಸ್ ಮಿತ್ರಪಕ್ಷಗಳತ್ತ ವಾಲಿದರೆ ಆಗ ಕಾಂಗ್ರೆಸ್ ಸರಕಾರ ಆಳಿತವಿದ್ದರೂ ಪರಿಷತ್ ಅಧಿಕಾರದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಲಖನ್ ಜಾರಕಿಹೊಳಿ ಅವರು ಹೆಚ್ಚು ಮಾತು ಕೇಳುವುದು ರಮೇಶ್ ಜಾರಕಿಹೊಳಿ ಅವರದು. ಒಂದು ವೇಳೆ ರಮೇಶ್ ಜಾರಕಿಹೊಳಿ ಮನಸ್ಸು ಮಾಡಿದರೆ ಬಿಜೆಪಿ ಹಾಗೂ ಜೆಡಿಎಸ್ ಮಿತ್ರಕ್ಷದತ್ತ ಲಖನ್ ಅವರನ್ನು ಸೆಳೆದರೆ ಕಾಂಗ್ರೆಸ್ ಗೆ ಹಿನ್ನಡೆಯಾಗುತ್ತದೆ. ಇದಕ್ಕೂ ಮೀರಿ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಗೆ ಸಹೋದರನ ಮತ ಹಾಕಿಸಿದರೆ ಪರಿಷತ್ ನಲ್ಲಿ ಕಾಂಗ್ರೆಸ್ ಸಭಾಪತಿ ಹಾಗೂ ಉಪ ಸಭಾಪತಿ ಹುದ್ದೆ ಅಲಂಕರಿಸಲಿವೆ.


