ಕಾಲ್ತುಳಿತ ಪ್ರಕರಣ ; ನಾಲ್ವರ ಬಂಧನ, ಕೆಲವರು ಎಸ್ಕೇಪ್
ಬೆಂಗಳೂರು : RCB ವಿಜಯೋತ್ಸವ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಇನ್ನುಳಿದ ಹಲವರು ಎಸ್ಕೇಪ್ ಆಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಬೆನ್ನಲ್ಲೇ ಸಿಸಿಬಿ ಪೊಲೀಸರು ಕರ್ನಾಟಕ ರಾಜ್ಯ ಅಸೋಸಿಯೇಷನ್ ನ ಒಬ್ಬರು ಹಾಗೂ ಡಿಎನ್ಎ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಎಸ್ಸಿಎ ಮುಖ್ಯಸ್ಥರ ಮನೆ ಮೇಲೆ ದಾಳಿ ನಡೆಸಿದ್ದರು ಪ್ರಮುಖರು ರಾತ್ರಿಯೇ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಇನ್ನುಳಿದ ಹಲವರಿಗೆ ಹುಡುಕಾಟ ಮುಂದುವರಿದಿದೆ.


