Select Page

Advertisement

RCB ಸಂಭ್ರಮಾಚರಣೆಗೆ ಹೋಗಿದ್ದ ಸಹನಾ ದಾರುಣ ಅಂತ್ಯ ; ಮನೆಮಗಳು ಮಸಣಕ್ಕೆ

RCB ಸಂಭ್ರಮಾಚರಣೆಗೆ ಹೋಗಿದ್ದ ಸಹನಾ ದಾರುಣ ಅಂತ್ಯ ; ಮನೆಮಗಳು ಮಸಣಕ್ಕೆ

ಬೆಂಗಳೂರು : RCB ವಿಜಯೋತ್ಸವ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಜನ ಸಾವಣಪ್ಪಿದ್ದರೆ ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ದುರಂತ ಕಥೆಗಳು ಬಯಲಾಗುತ್ತಿವೆ.

ನಿನ್ನೆ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಘಟನೆಯಲ್ಲಿ ಕೋಲಾರದ ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಸಹನಾ ( 24 ) ಮೃತಪಟ್ಟಿದ್ದಾರೆ. ಸಹನಾ ಸಾವಿಗೆ ಇಡೀ ಕುಟುಂಬವೇ ಶಾಕ್ ಗೆ ಒಳಗಾಗಿದೆ.

ಸಹನಾ ತಂದೆ ಹಾಗೂ ತಾಯಿ ಇಬ್ಬರು ಶಿಕ್ಷಕರು. ಇತ್ತೀಚಿಗೆ ಇಂಜಿನಿಯರಿಂಗ್ ಪದವಿ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ನಿನ್ನೆ ನಡೆದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಕಾಲ್ತುಳಿತ ಘಟನೆ ಕುರಿತಾಗಿ RCB ಇಂದು ಬೆಳಿಗ್ಗೆ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಘಟನೆ ಕುರಿತು ನೋವು ಹೊರಹಾಕಿದೆ. ವಿರಾಟ್ ಕೊಹ್ಲಿ ಅವರೂ ಸಂತಾಪ ಸೂಚಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!