ಸಾಲಕ್ಕೆ ಹೆದರಿ ಒಂದೇ ಕುಟುಂಬದ ಏಳು ಜನ ಆತ್ಮಹತ್ಯೆ
ಹರಿಯಾಣ : ಅಧಿಕ ಸಾಲಕ್ಕೆ ಹೆದರಿ ಒಂದೇ ಕುಟುಂಬದ ಏಳು ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣ ರಾಜ್ಯದ ಪಂಚಕುಲಾದಲ್ಲಿ ನಡೆದಿದೆ.
ಪಂಚಕುಲಾ ನಿವಾಸಿಗಳಾದ ಪ್ರವೀಣ್ ಮಿತ್ತಲ್, ತಂದೆ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳು ವಿಷ ಸೇವಿಸಿ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಏಳು ಜನರ ಮೃತದೇಹಹಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾಣೆ ಮಾಡಲಾಗಿದೆ. ಈ ವೇಳೆ ಕಾರ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ.


