Select Page

Advertisement

ಮದುವೆಯಾದ ಎರಡೇ ದಿನಕ್ಕೆ ಯುದ್ಧಕ್ಕೆ ತೆರಳಿದ ಯೋಧ ; ಯುವತಿ ‌ಕಣ್ಣೀರು

ಮದುವೆಯಾದ ಎರಡೇ ದಿನಕ್ಕೆ ಯುದ್ಧಕ್ಕೆ ತೆರಳಿದ ಯೋಧ ; ಯುವತಿ ‌ಕಣ್ಣೀರು


ಜಲಗಾಂವ್ : ಮದುವೆಯಾದ ವಾರದವರೆಗೆ ದಿನಕ್ಕೆ ಅರಿಶಿನ ಮೈ ಎಂದು ಮನೆಯವರು ಮದುಮಗಳನನ್ನು ಹೊರಗೆ ಕಳುಹಿಸಲು ಹಿಂದೆ ಮುಂದೆ ನೋಡುವ ಕಾಲದಲ್ಲಿ ಎರಡನೇ ದಿನಕ್ಕೆ ದೇಶಕ್ಕಾಗೆ ಸೇವೆ ಸಲ್ಲಿಸಲು ಯೋಧ ಗಡಿಗೆ ತೆರಳಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಜಲಗಾಂವ್ ನ ನಾಚಂಖೇಡೆಯಲ್ಲಿ ನಡೆದಿದೆ.‌

ಯೋಧ ಮನೋಜ್ ಪಾಟೀಲ್ ಎಂಬುವವರಿಗೆ ಕಳೆದ ಮೇ. 5 ರಂದು ಯಾಮಿನಿ ಎಂಬುವವರ ಜೊತೆ ಮದುವೆಯಾಗಿತ್ತು. ಇದಾದ ಎರಡೇ ದಿನದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ಸೇನೆ ಮನೋಜ್ ಅವದ ರಜೆ ಕಡಿತಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.

ದೇಶ ಸೇವೆಗಾಗಿ ಸೈನ್ಯದಿಂದ ಕರೆ ಬಂದಿದ್ದೆ ತಡ ಯುವಕ ಬ್ಯಾಗ್ ಹಿಡಿದು ರೈಲು ಹತ್ತಿದ್ದಾನೆ.‌ ಇತ್ತ ಮದುವೆ ನಂತರದಲ್ಲಿ ಹತ್ತಾರು ಕನಸು ಹೊತ್ತಿದ್ದ ಬಾಳಸಂಗಾತಿ ಕಣ್ಣೀರು ಹಾಕುತ್ತಲೇ ಬೇಡದ ಮನಸ್ಸಿನಿಂದ ಪತಿಯನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಕುಟುಂಬದವರು ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವಾಗ ಮಗ ಸೇವೆಗೆ ಹೊರಟ್ಡಿದ್ದು ಹೆಮ್ಮೆ ತರಿಸುತ್ತದೆ ಎಂದು ಹೇಳಿದ್ದಾರೆ.

ಕಳೆದ 2017 ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಮನೋಜ್ ಪಾಟೀಲ್ ಇದೇ ಮೇ. 5 ರಂದು ಅದ್ಧೂರಿ ಮದುವೆಯಾಗಿದ್ದರು. ಮದುವೆ ಕಾರಣಕ್ಕೆ ಒಂದು ತಿಂಗಳ ರಜೆ ಮೇಲೆ ಬಂದಿದ್ದ ಇವರಿಗೆ ತಕ್ಷಣ ಸೇನೆ ವಾಪಸ್ ಬರುವಂತೆ ತಿಳಿಸಿದ ಹಿನ್ನಲೆಯಲ್ಲಿ ತೆರಳಿದ್ದಾರೆ. ಇನ್ನೂ ರೈಲು ನಿಲ್ದಾಣದಲ್ಲಿ ಮನೋಜ್ ಕುಟುಂಬದವರು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಂತವರನ್ನೂ ನೋಯಿಸುವಂತಿತ್ತು.

ಒಟ್ಟಿನಲ್ಲಿ ತಾಯ್ನಾಡಿಗೆ ಸಂಕಷ್ಟದ ಪರಿಸ್ಥಿತಿ ಎದುರಾದರೆ ಪ್ರತಿಯೊಬ್ಬ ಸೈನಿಕನೂ ತನ್ನ ಮನೆ ತೊರೆದು ದೇಶದ ಜನರಿಗೆ ಹೋರಾಡುವ ಅವರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

Advertisement

Leave a reply

Your email address will not be published. Required fields are marked *

error: Content is protected !!