ಬೆಳಿಗ್ಗೆ ಯುದ್ಧ ಪ್ರಾರಂಭಿಸಿ ಸಂಜೆ ಮುಗಿಸಲಿ ಬೇಡ ಯಾರಂದ್ರು..? ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ಆರ್ಥಿಕತೆ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಅವರು ಯುದ್ಧ ಬೇಡ ಎಂದು ಹೇಳಿದ್ದು ಬಿಟ್ಟರೆ ಬೇರೆ ಉದ್ದೇಶವಿಲ್ಲ. ಅವರೇನು ಲೆಫ್ಟಿನೆಂಟ್ ಅಲ್ಲ. ಕೇಂದ್ರ ಸರಕಾರ ಬೆಳಿಗ್ಗೆಯಿಂದಲೇ ಯುದ್ಧ ಪ್ರಾರಂಭಿಸಲಿ ನಮ್ಮ ಅಭ್ಯಂತರವಿಲ್ಲವೆಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ಪ್ರಾರಂಭಿಸುವುದು ಕೇಂದ್ರ ಸರಕಾರಕ್ಕೆ ಬಿಟ್ಟ ವಿಚಾರ. ನಮ್ಮನ್ನು ಕೇಳುವ ಅವಶ್ಯಕತೆ ಇಲ್ಲ. ಬೇಕಿದ್ದರೆ ಬೆಳಿಗ್ಗೆ ಪ್ರಾರಂಭಿಸಿ ರಾತ್ರಿ ವೇಳೆಗೆ ಬಂದ್ ಮಾಡಲಿ. ರಾಜಕೀಯ ಉದ್ದೇಶಕ್ಕೆ ಈ ರೀತಿಯ ಹೇಳಿಕೆಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.
ಕೇಂದ್ರ ಸರಕಾರ ತನ್ನ ಭದ್ರತಾ ವೈಫಲ್ಯದ ಕುರಿತು ಮಾತನಾಡುತ್ತಿಲ್ಲ. ಕೇವಲ ಹಿಂದೂ ಮುಸ್ಲಿಂ ಎಂಬ ವಿಷಯವನ್ನೇ ಮುಂದೆ ಮಾಡುತ್ತಿದೆ. ಯುದ್ಧ ಮಾಡಲು ಕೇಂದ್ರದವರು ಸ್ವತಂತ್ರರಾಗಿದ್ದಾರೆ ಎಂದರು.


