ವಿಜಯದಶಮಿಗೆ ಹೊಸ ಪಕ್ಷ ; ಯತ್ನಾಳ್ ಮಹತ್ವದ ಘೋಷಣೆ
ವಿಜಯಪುರ : ಕೊನೆಗೆ ಬಿಜೆಪಿಯಿಂದ ಉಚ್ಚಾಟನೆ ಆಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಈಗ ಮತ್ತೊಮ್ಮೆ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.
ನಾನು ಯಡಿಯೂರಪ್ಪ ವಿರೋಧಿ, ಉತ್ತರ ಕರ್ನಾಟಕಕ್ಕೆ ವಿರೋಧ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷ ನನ್ನ ತಾಯಿ ಎಂದು ಭಾವಿಸಿದ್ದೇ. ನನ್ನ ಹೊರಗೆ ಹಾಕಲಾಗಿದ್ದು, ಸರಿಯಾದ ಪ್ರತ್ಯುತ್ತರ ನೀಡುವೆ ಎಂದರು.
ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಮಾತನಾಡಿದ ಇವರು. ಬರುವ ವಿಜಯ ದಶಮಿ ಸಂದರ್ಭದಲ್ಲಿ ಹೊಸ ಪಕ್ಷ ಘೋಷಣೆ ಮಾಡುತ್ತೇವೆ. ಹಿಂದುತ್ವಕ್ಕಾಗಿ ಹೊಸ ಪಕ್ಷ ಪಕ್ಕಾ ಎಂದು ಯತ್ನಾಳ್ ಹೇಳಿದ್ದಾರೆ.


