Select Page

Advertisement

ವಿಜಯಪುರ ಯುವತಿ ಬೆಳಗಾವಿಯಲ್ಲಿ ಆತ್ಮಹತ್ಯೆ ; ಸಾವಿಗೆ ಕಾರಣವಾಯ್ತಾ ಪ್ರೀತಿ…?

ವಿಜಯಪುರ ಯುವತಿ ಬೆಳಗಾವಿಯಲ್ಲಿ ಆತ್ಮಹತ್ಯೆ ; ಸಾವಿಗೆ ಕಾರಣವಾಯ್ತಾ ಪ್ರೀತಿ…?

ಬೆಳಗಾವಿ : ಯುವಕನ ಜೊತೆ ಮಾತನಾಡಿದ ಕೆಲವೇ ಕ್ಷಣದಲ್ಲಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ನೆಹರು ನಗರದಲ್ಲಿ ನಡೆದಿದೆ.

ವಿಜಯಪುರ ಮೂಲದ ಐಶ್ವರ್ಯಲಕ್ಷ್ಮೀ ಗಲಗಲಿ ( 24 ) ಮೃತ ಯುವತಿ. ಕಳೆದ ಮೂರು ತಿಂಗಳಿನಿಂದ ಬೆಳಗಾವಿಯ ಏಕಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಎಂ,ಬಿ,ಎ ಪದವಿ ಪಡೆದಿದ್ದ ಯುವತಿ ಸಾಯಿಕೃಪಾ ಪಿಜಿ ಯಲ್ಲಿ ವಾಸವಿದ್ದಳು.

ಮಂಗಳವಾರ ಎಂದಿನಂತೆ ಪಿಜಿ ಗೆ ಬಂದ ಯುವತಿ ಮೋಬೈಲ್ ನಲ್ಲಿ ಮಾತನಾಡುತ್ತಿದ್ದಳು. ಮೇಲೆ ತನ್ನ ರೂಂ ಗೆ ಹೋಗುತ್ತಿರಯವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ನಂತರ ಓರ್ವ ಯುವಕ ಪಿ.ಜಿ ಕಡೆ ಓಡಿ ಬಂದಿದ್ದಾನೆ.

ಯುವತಿ ಸಾವಿಗೆ ಪ್ರೇಮ ವೈಫಲ್ಯ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಯುವತಿಯ ಶವವನ್ನು ಮರಣೋತ್ತರ ‌ಪರೀಕ್ಷೆ ನಡೆಸಲಾಗಿದೆ. ಯುವತಿ ಜೊತೆ ಕೊನೆ ಬಾರಿಗೆ ಮಾತನಾಡಿದ ಹಾಗೂ ಪಿಜಿ ಕಡೆ ಬಂದಿದ್ದ ಯುವಕನಿಗಾಗಿ ಶೋಧಕಾರ್ಯ ನಡೆಯುತ್ತಿದೆ‌. ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!