ಹುಕ್ಕೇರಿ ಮಹಿಳೆಗೆ ಗಂಡನೇ ದುಶ್ಮನ್ ; ಮಹಿಳೆ ಬೆನ್ನಿಗೆ ಚಾಕು ಹಾಕಿದ ಕಿರಾತಕ
ಬೆಳಗಾವಿ : ಅವರುದ್ದು ನಾಲ್ಕು ವರ್ಷದ ಸಂಸಾರ. ಸಂಸಾರಕ್ಕೆ ಕೊಳ್ಳಿ ಇಟ್ಟಿತ್ತು ಗಂಡನ ಸರಾಯಿ ಚಟ. ಕಳೆದ ನಾಲ್ಕು ದಿನಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ವಿಚ್ಚೇದನ ಪಡೆದಿದ್ದ ಕುಡುಕ ಗಂಡ ಸಂತೆಗೆ ಹೋಗಿದ್ಧ ಹೆಂಡತಿಗೆ ಚಾಕು ಇರಿದ ಘಟನೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ನಡೆದಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಹೌದು. ಮದುವೆಯಾದ ದಿನದಿಂದಲೂ ಗಂಡನ ಕುಡಿದು ಬಂದು ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದ ತವರು ಮನೆಗೆ ಬಂದು ಹೆಂಡತಿ ಆರೇಳು ತಿಂಗಳಾಗಿತ್ತು. ನಿನ್ನೆ ಸಂತೆಗೆ ಹೋದ ವೇಳೆ ಗಂಡ ಕುಡಿದು ಬಂದು ಚಾಕು ಹಾಕಿ ಪರಾರಿಯಾಗಿದ್ದಾನೆ. ಹಾಲಪ್ಪ ಹಾಗೂ ಉದ್ಧವಾ ಎಂಬ ದಂಪತಿ ನಡುವೆ ಬಂದಿದ್ದು ಸರಾಯಿ ಎಂಬ ಭೂತ.
ಸರಾಯಿ ಕುಡಿದು ನಿತ್ಯ ಹೆಂಡತಿಗೆ ಕಿರುಕುಳ ಕೊಡುತ್ತಿದ್ದನ್ನು ಗಮನಿಸಿದ ಹೆಂಡತಿ ಮನೆಯವರು ಹಾಲಪ್ಪನ ಮನೆಗೆ ಹೋಗಿ ಸಂದಾನ ಮಾಡಿಸಿದ್ದರು. ಆದರೆ ಪದೇ ಪದೇ ಅದೇ ದಾಳಿಯನ್ನು ಮುಂದುವರೆಸಿದ್ದ ಹಾಲಪ್ಪನಿಗೆ ಉದ್ದವಾ ನಾಲ್ಕು ದಿನದ ಹಿಂದೆ ವಿಚ್ಚೇದನ ನೀಡಿದ್ದಳು.
ಹೆಂಡತಿ ವಿಚ್ಚೇದನ ನೀಡಿದ್ದನ್ನು ಮನಸ್ಸಿಲ್ಲಿಟ್ಟುಕೊಂಡು ಬಂದ ಗಂಡ ಏಕಾಏಕಿ ನಿನ್ನೆ ಚಾಕು ಹಾಕಿ ಪರಾರಿಯಾಗಿದ್ದಾನೆ. ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಹೆಂಡತಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸರಾಯಿ ಕುಡಿದು ಬಂದು ನನ್ನ ಮೇಲೆ ಹಲ್ಲೆ ಮಾಡಲು ಹಾಲಪ್ಪ ನನಗೆ ಮದುವೆಯಾಗಿದ್ದ. ನಿತ್ಯ ಕುಡಿದು ಬರುವುದು ಹಲ್ಲೆ ಮಾಡುವುದು ಕಾಯಕವಾಗಿತ್ತು. ಆದ್ದರಿಂದ ನಾಲ್ಕು ದಿನದ ಹಿಂದೆ ವಿಚ್ಚೇದನ ನೀಡಿದ್ದೆ.
ನನ್ನ ಮಗಳ ಜೊತೆಗೆ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ನನ್ನ ಮಗಳು ಆತನಿಗೆ ವಿಚ್ಚೇದನ ನೀಡಿದ್ದಾಳೆ. ಸಂತೆಗೆ ಹೋದಾಗ ಬಂದು ಚಾಕು ಹಾಕಿ ಪರಾರಿಯಾಗಿದ್ದಾನೆ.


