ಬೀದರ : ಪ್ರೀತಿಸಿ ಮದುವೆಯಾದ  ಪತಿ ಪತ್ನಿ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೀದರ ಜಿಲ್ಲೆಯ ಔರಾದ ತಾಲೂಕಿನ ಬಾಚೇಪಳ್ಳಿ ಗ್ರಾಮದಲ್ಲಿ ನಡೆದಿದೆ.

ಪತ್ನಿಯೇ ಪತಿಯ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮ್ರತ ಶ್ರೀಧರ (28) ಐದು ವರ್ಷದ ಹಿಂದೆ ಲಾಧಾ ಗ್ರಾಮದ ಸವಿತಾ ಜತೆಗೆ ಪ್ರೀತಿಸಿ ಮದುವೆಯಾಗಿದ್ದ. ಈ ನಡುವೆ ಅನೇಕ ಬಾರಿ ಸವಿತಾ ಮತ್ತು ಶ್ರೀಧರ ಮಧ್ಯೆ ಜಗಳವಾಗಿವೆ. ಕೊಲೆ ಮಾಡುವ ಉದ್ದೇಶದಿಂದ ಕೈ ಕಾಲಿಗೆ ಹಗ್ಗ ಕಟ್ಟಿ ತಲೆಗೆ ಹೊಡೆದಿದ್ದಾರೆ.

ಪತ್ನಿ ಸವಿತಾ ಜೋಜನೆ. ಅವಳ ತಾಯಿ ವಿಜಯಲಕ್ಷ್ಮೀ ಎಂಪಳ್ಳೆ.ತಂದೆ ಶೆಶಿಕಾಂತ ಎಂಪಳ್ಳೆ ಜೊತೆ ಸೇರಿ ಹತ್ಯೆ ಮಾಡಿದ್ದಾಳೆ. ಎಂದು ಮ್ರತ ಶ್ರೀಧರ ತಂದೆ ಶಿವರಾಜ ಜೋಜನೆ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. 

ಈ ಕುರಿತು ಮೃತನ ತಂದೆ  ಶಿವರಾಜ ಜೋಜನೆ ನೀಡಿದ ದೂರಿನ ಮೇರೆಗೆ ಸಂತಪೂರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ ಐ ನಂದಕುಮಾರ ಮೂಳೆ ತಿಳಿಸಿದ್ದಾರೆ.