Select Page

Advertisement

ಪುಂಡರ ವಿರುದ್ಧ ಕರವೇ ಸಮರ ; ಪೋಕ್ಸೋ ಕೇಸ್ ವಾಪಸ್ ಗೆ ಹೆಚ್ಚಿದ ಆಗ್ರಹ

ಪುಂಡರ ವಿರುದ್ಧ ಕರವೇ ಸಮರ ; ಪೋಕ್ಸೋ ಕೇಸ್ ವಾಪಸ್ ಗೆ ಹೆಚ್ಚಿದ ಆಗ್ರಹ

ಬೆಳಗಾವಿ : ಮರಾಠಿ ಭಾಷೆ ಬರುವುದಿಲ್ಲ ಕನ್ನಡ ಮಾತನಾಡಿ ಎಂದಿದ್ದಕ್ಕೆ ಸರಕಾರಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದ್ದು, ನನಗೆ ಲೈಂಗಿಕ ‌ಕಿರುಕುಳ‌ ನೀಡಿದ್ದಾನೆ ಎಂದು ಆರೋಪಿಸಿ‌ ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ಯುವತಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಶನಿವಾರ ಪೋಕ್ಸೋ ಪ್ರಕರಣ ದಾಖಲಿಸಿದ್ದಾಳೆ.‌

ಕಂಡಕ್ಟರ್ ಹಲ್ಲೆ ಖಂಡಿಸಿ ಬೆಳಗಾವಿ ನಗರದಲ್ಲಿ ಶನಿವಾರ ಕನ್ನಡಪರ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವ ಪುಂಡರು ಪೋಕ್ಸೋ ಪ್ರಕರಣ ದಾಖಲಿಸಿ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ.

ಈ ಕುರಿತು ಜಿಲ್ಲೆಯ ಯಾವೊಬ್ಬ ರಾಜಕಾರಣಿ ತುಟಿ ಬಿಚ್ಚದೆ ಇರುವುದು ಶೋಚನೀಯವಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೋರಾಟಗಾರರು ಆಗ್ರಹಿಸಿದರು.

ಸಧ್ಯ ಕಂಡಕ್ಟರ್ ಮೇಲೆ ಹಾಕಲಾಗಿರುವ ಪೋಕ್ಸೋ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು ಇದನ್ನು ವಾಪಸ್ ಪಡೆಯುವಂತೆ ಕರವೇ ಕಾರ್ಯಕರ್ತರು ಆಗ್ರಹಿಸಿ ನಿನ್ನೆಯಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ ಕರ್ನಾಟಕದ ಸಾರಿಗೆ ಬಸ್ ಗಳನ್ನು ರಾಜ್ಯದ ಗಡಿವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!