Select Page

Advertisement

ಮೂಡಲಗಿ : ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ನಿಧನ

ಮೂಡಲಗಿ : ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ನಿಧನ

ಬೆಳಗಾವಿ : ಭಾರತೀಯ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಗುಂಡು ತಗುಲಿ ಯೋಧ ಸಾವಣಪ್ಪಿರುವ ಘಟನೆ ಚೆನೈ ನಲ್ಲಿ ನಡೆದಿದೆ.

ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿಯ ಪ್ರವೀಣ ಖಾನಗೌಡ್ರ (24) ಮೃತ ಯೋಧ.‌ ಕಳೆದ ಐದು ವರ್ಷಗಳಿಂದ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ಆಕಸ್ಮಿಕವಾಗಿ ಗುಂಡು ತಗುಲಿ ಯೋಧ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

2020 ರಲ್ಲಿ ನೌಕಾಪಡೆಗೆ ಸೇರಿದ್ದ ಇವರು ಕೇರಳದ ಕೊಚ್ಚಿಯಲ್ಲಿ ತರಬೇತಿ ಪಡೆದಿದ್ದರು, ನಂತರ ಅಂಡಮಾನ್ ಹಾಗೂ ಸಧ್ಯ ಚೆನೈ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ಮೃತ ಯೋಧನ ಅಂತ್ಯಕ್ರಿಯೆ ಕಲ್ಲೋಳಿ ಪಟ್ಟಣದಲ್ಲಿ ಜರುಗಲಿದೆ ಎಂದು ಕುಟುಂಬದ ‌ಮೂಲಗಳು ತಿಳಿಸಿವೆ.

Advertisement

Leave a reply

Your email address will not be published. Required fields are marked *

error: Content is protected !!