ಮೇಲುಗೈ, ಕೆಳಗೈ ಅಂತ ಏನಿಲ್ಲ ; ಹೀಗ್ಯಾಕಂದ್ರು ಲಕ್ಷ್ಮಣ ಸವದಿ
ಬೆಳಗಾವಿ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಯ್ಕೆ ಎಲ್ಲಾ ಮುಖಂಡರ ಸರ್ವಾನುಮತದಿಂದ ನಡೆದಿದೆ. ಎಲ್ಲಾ ರೀತಿಯ ಚರ್ಚೆಯ ನಂತರ ನೂತನ ಅಧ್ಯಕ್ಷರ ಆಯ್ಕೆ ನಡೆದಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಅಂಗವಾಗಿ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಾರಕಿಹೊಳಿ ಸಹೋದರರ ಮೇಲುಗೈ ಚರ್ಚೆ ಶುರುವಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಇವರು.
ಅಧ್ಯಕ್ಷ ಸ್ಥಾನದ ಆಯ್ಕೆ ಅವಿರೋಧವಾಗಿ ನಡೆದಿದೆ. ಮೇಲುಗೈ, ಕೆಳಗೈ ಅಂತಾ ಎನಿಲ್ಲ. ಎಲ್ಲರ ಜೊತೆಗೆ ಚರ್ಚೆ ಮಾಡಿ ಆಯ್ಕೆ ಮಾಡಲಾಗಿದೆ. ಇಲ್ಲೇನೂ ಚುನಾವಣೆ ಆಗಿದೆಯಾ. ಚುನಾವಣೆ ಆಗಿಲ್ಲ ಅವಿರೋಧ ಆಗಿದೆ ಅಂದ್ರೆ ಮೇಲುಗೈ ಕೆಳಗೈ ಹೇಗಾಗುತ್ತೆ. ಇದಕ್ಕೆ ರೆಕ್ಕೆ, ಪುಕ್ಕ ಕಟ್ಟುವುದು ಬೇಡ ಎಂದರು.
ಜಾರಕಿಹೊಳಿ ಸಹೋದರರು ನಡೆಸಿದ್ದ ಸಭೆಗೆ ಲಕ್ಷ್ಮಣ ಸವದಿ ಗೈರಾಗಿದ್ದರು. ನಂತರ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಗೆ ಆಗಮಿಸಿ ನೂತನ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗುಡೆ ಅವರಿಗೆ ಅಭಿನಂದನೆ ಸಲ್ಲಿಸಿದರು.


