ಅಯ್ಯಪ್ಪ ಮಾಲಾಧಾರಿಗಳಿಗೆ ಸಿಹಿ ಸುದ್ದಿ ; ಶಬರಿಮಲೆಗೆ ವೋಲ್ಟೋ ಬಸ್ ಸೇವೆ ಪ್ರಾರಂಭ
ಬೆಂಗಳೂರು : ಅಯ್ಯಪ್ಪ ಮಾಲಾಧಾರಿಗಳಿಗೆ ಸಿಹಿ ಸುದ್ದಿ ಬಂದಿದೆ. ಕೆಎಸ್ಆರ್ಟಿಸಿ ಪ್ರಯತ್ನದ ಫಲವಾಗಿ ಮೊದಲಬಾರಿಗೆ ಕೇರಳದ ಶಬರಿಮಲೆಗೆ ವೋಲ್ಟೋ ಬಸ್ ಸೇವೆ ಕಲ್ಪಿಸಲಾಗಿದೆ.
ಇದೇ ನವೆಂಬರ್ 29 ರಿಂದ ಬೆಂಗಳೂರು – ಶಬರಿಮಲೆ ಬಸ್ ಸೇವೆ ಆರಂಭವಾಗಲಿದೆ. ಶಬರಿಮಲೆ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ವೋಲ್ಟೋ ಬಸ್ ಸಂಚಾರ ಸೇವೆ ಆರಂಭಗೊಂಡಿದೆ.
ಶಾಂತಿನಗರದಿಂದ ನೀಲಕ್ಕಲ್ – ನೀಲಕ್ಕಲ್ ನಿಂದ ಶಾಂತಿನಗರದ ವರೆಗೆ ಬಸ್ ಸಂಚಾರ ಮಾಡಲಿದೆ. ಶಬರಿಮಲೆಗೆ ಸಂಚರಿಸಲು 1,750 ರೂ. ದರ ನಿಗದಿಪಡಿಸಿ ಕೆಎಸ್ಆರ್ಟಿಸಿ ಆದೇಶ ಹೊರಡಿಸಿದೆ.


