ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯಲ್ಲಿ ಬುರ್ಖಾ ತೆಗೆಯಲು ನಿರಾಕರಿಸಿದ ಯುವತಿ ; ಕುಟುಂಬ ಸಾಥ್
ದಾವಣಗೆರೆ : ಹಿಜಾಬ್ ವಿವಾದ ತನ್ನಗಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಯೋರ್ವಳು ಪರೀಕ್ಷೆ ಸಂದರ್ಭದಲ್ಲಿ ಬುರ್ಖಾ ತೆಗೆಯಲು ನಿರಾಕರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಎಸ್ಎಸ್ ಲೇಔಟ್ ರಾಘವೇಂದ್ರ ಕಾಲೇಜಿನಲ್ಲಿ ಭಾನುವಾರ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿನಿ ಬುರ್ಖಾ ತೆಗೆಯಲು ನಿರಾಕರಣೆ ಮಾಡಿದ್ದಾಳೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಪೋಷಕರು ಸಾಥ್ ನೀಡಿದ್ದು ಯಾವುದೇ ಕಾರಣಕ್ಕೂ ಬುರ್ಖಾ ತಗೆಯುವುದಿಲ್ಲ ಎಂದು ಮೊಂಡುತನ ಪ್ರದರ್ಶನ ಮಾಡಿದ್ದಾರೆ. ಇದರಿಂದ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪರೀಕ್ಷಾ ನಿಯಮದ ಪ್ರಕಾರ ಬುರ್ಖಾ ಧರಿಸುವಂತಿರಲಿಲ್ಲ. ಆದರೆ ಯಾವುದೇ ಕಾರಣಕ್ಕೂ ಬುರ್ಖಾ ತಗೆಯುವುದಿಲ್ಲ ಎಂದು ಯುವತಿ ಹಠ ಹಿಡಿದಿದ್ದಾಳೆ. ಸ್ಥಳೀಯ ಪೊಲೀಸರು ಎಷ್ಟೇ ಮನವರಿಕೆ ಮಾಡಿಕೊಟ್ಟರು ಸಾಧ್ಯವಾಗಲಿಲ್ಲ.
ಕೊನೆಗೆ ಎಎಸ್ಪಿ ವಿಜಯಕುಮಾರ್ ವಿದ್ಯಾರ್ಥಿನಿಗೆ ಪರೀಕ್ಷಾ ನಿಯಮದ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ನಂತರ ಬುರ್ಖಾ ತಗೆದು ಪರೀಕ್ಷೆಗೆ ಹಾಜರಾಗಿದ್ದು, ಯುವತಿ ಮನವೊಲಿಸಲಾಗಿದೆ.


