ಅಪ್ಪನ ಸಾವಿಗೆ ಅನುಮಾನ ; ಸ್ವತಃ ತಾಯಿಯ ವಿರುದ್ಧ ದೂರು ದಾಖಲು ; ಉದ್ಯಮಿ ಸಂತೋಷ್ ಪದ್ಮಣ್ಣವರ ಸಾವಿನ ಸುತ್ತ ಅನುಮಾನದ ಹುತ್ತ….!
ಬೆಳಗಾವಿ : ಹೃದಯಾಘಾತದಿಂದ ಉದ್ಯಮಿ ಸಂತೋಷ್ ಪದ್ಮಣ್ಣವರ್ ಮೃತಪಟ್ಟಿದ್ದ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು ತನ್ನ ತಂದೆಯ ಸಾವು ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿ ತಾಯಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೆರಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಅಕ್ಟೋಬರ್. 9 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾದ ಉದ್ಯಮಿ ಸಂತೋಷ್ ಪದ್ಮಣ್ಣವರ್ ಅವರ ಸಾವಿನ ಹಿಂದೆ ಕಾಣದ ಕೈಗಳ ಕೈವಾಡ ಇದ್ದು ತಂದೆಯ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಂಜನಾ
ಪದ್ಮಣ್ಣವರ್ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
ಆರೋಗ್ಯವಾಗಿದ್ದ ಉದ್ಯಮಿ ಸಂತೋಷ್ ಪದ್ಮಣ್ಣವರು ದಿಢೀರ್ ಹೃದಯಾಘಾತದಿಂದ ಅಕ್ಟೋಬರ್ 9 ರಂದು ನಿಧನರಾಗಿದ್ದರು. ಹಾಗೆಯೇ ಮನೆಯವರು ಸೇರಿಕೊಂಡು ಇವರ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ಮುಗಿಸಿದ್ದರು.
ಅನುಮಾನಗೊಂಡ ಸಂತೋಷ್ ಪುತ್ರಿ ಸಂಜನಾ ಅಪ್ಪನ ಸಾವು ಹೃದಯಾಘಾತದಿಂದ ಆಗಿದ್ದು ಅನುಮಾನ ಹುಟ್ಟುಹಾಕಿದೆ ಎಂದು ಸಂಬಂಧಿಕರ ಮುಂದೆ ಹೇಳಿಕೊಂಡಿದ್ದಾರೆ. ತಂದೆಯ ಅಂತ್ಯಸಂಸ್ಕಾರದ ನಂತರ ಮನೆಯ ಸಿಸಿಟಿವಿ ವೀಡಿಯೋ ನೋಡುವುದಾಗಿ ತಾಯಿಯ ಬಳಿ ಹೇಳಿಕೊಂಡಿದ್ದಾರೆ.
ಆದರೆ ಸಂತೋಷ್ ಪದ್ಮಣ್ಣವರ ಪತ್ನಿ ಉಮಾ ಪದ್ಮಣ್ಣವರ್ ಮನೆಯ ಸಿಸಿಟಿವಿ ವೀಡಿಯೋಗಳನ್ನು ಡಿಲಿಟ್ ಮಾಡಿಸಿದ್ದಾರೆ.
ಅನುಮಾನಗೊಂಡ ಪುತ್ರಿ ಸಂಜನಾ ಪಕ್ಕದ ಮನೆಯವರ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಇಬ್ಬರು ಅಪರಿಚಿತರು ಅರ್ಧ
ಗಂಟೆಗೆ ಹೆಚ್ಚುಕಾಲ ಮನೆಯಲ್ಲಿ ಇದ್ದು ವಾಪಸ್ ಹೋಗಿದ್ದು ಬೆಳಿಕಿಗೆ ಬಂದಿದೆ. ಈ ಎಲ್ಲಾ ವಿಚಾರ ಪಡೆದ ನಂತರ ತಂದೆಯ ಸಾವಿನ ಕುರಿತು ತನಿಖೆ ನಡೆಸುವಂತು ನಗರ ಪೊಲೀಸ್ ಠಾಣೆಗೆ ಸಂಜನಾ ಪದ್ಮಣ್ಣವರ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್. ಸಂತೋಷ್ ಪದ್ಮಣ್ಣವರ ಸಾವಿನ ಕುರಿತು ಪುತ್ರಿ ಸಂಜನಾ ಎಂಬುವವರು ದೂರು ದಾಖಲಿಸಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಪ್ರಕರಣ ಸತ್ಯಾಸತ್ಯತೆ ಹೊರಬಲಿದೆ ಎಂದರು.
ಸಂಸಯ ಮೂಡಿಸಿದ ವಿಷಯ : ಸಂತೋಷ್ ಪದ್ಮಣ್ಣವರ ತಮ್ಮ ಸಾವಿನ ನಂತರ ಮೃತದೇಹವನ್ನು ದಾನ ಮಾಡಲು ನಿರ್ಧರಿಸಿದ್ದರು. ಈ ಕುರಿತು ನೊಂದಣಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇನ್ನೂ ಇವರ ಮನೆಯಲ್ಲಿದ್ದ ಡಿಸಿಟಿವಿ ದೃಶ್ಯಗಳನ್ನು ಅಳಿಸಿ ಹಾಕಲಾಗಿದೆ. ಜೊತೆಗೆ ಮನೆಯಲ್ಲಿ ಕೌಟುಂಬಿಕ ಕಲಹ ಇತ್ತು ಎಂಬ ಅಂಶ ಬೆಳಕಿಗೆ ಬಂದಿದ್ದು ಇನ್ನೂ ಕೆಲ ಗಂಭೀರ ವಿಷಯಗಳು ಈ ಪ್ರಕರಣದಲ್ಲಿ ಸುಳಿದಾಡುತ್ತಿವೆ.


