ಆದರ್ಶ ಆಸ್ಪತ್ರೆ ವೈದ್ಯರ ಅವಾಂತರ ; ಗರ್ಭಿಣಿ ಮಹಿಳೆ ಸಾವು
ಬೆಳಗಾವಿ : ವೈದ್ಯರ ನಿರ್ಲಕ್ಷ್ಯಕ್ಕೆ ನಾಲ್ಕು ತಿಂಗಳ ಗರ್ಭಿಣಿ ಮೃತಪಟ್ಟಿದ್ದಾಳೆ ಎನ್ನುವ ಆರೋಪ ಬುಧವಾರ ಕುಟುಂಬಸ್ಥರು ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ಆರತಿ ಚವ್ಹಾಣ್(32) ಮೃತಪಟ್ಟ ಗರ್ಭಿಣಿ. ಮಂಗಳವಾರ ಬೆಳಗ್ಗೆ ಹೊಟ್ಟೆ ನೋವು ಎಂದು ಇಲ್ಲಿನ ಗೊಂದಳಿ ಗಲ್ಲಿಯ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದ ಆರತಿ. ಇಪ್ಪತ್ತೈದು ಸಾವಿರ ಹಣ ಕಟ್ಟಿಸಿಕೊಂಡು ಬೆಳಗ್ಗೆ 11ಗಂಟೆಗೆ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಮಾಡಿದರು.
ಈ ವೇಳೆ ನಾಲ್ಕು ತಿಂಗಳ ಶಿಶು ಇದೆ ಅಂತಾ ಒಂದು ಬಾರಿ ಹೇಳಿದ್ದರು. ಬಳಿಕ ಸ್ವಲ್ಪ ಹೊತ್ತಿನ ಬಳಿಕ ಆರು ತಿಂಗಳ ಕೂಸಿದೆ ಎಂದು ಹೇಳಿ ಆಪರೇಷನ್ ಬಳಿಕ ಮಧ್ಯಾಹ್ನ 2ಗಂಟೆ ಮತ್ತೆ ಜೋರಾಗಿದ್ದ ಹೊಟ್ಟೆ ನೋವು. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರದೇ ನರ್ಸ್ ಗಳಿಂದ ಚಿಕಿತ್ಸೆ ನೀಡಿದ್ದರು.
ಸಂಜೆ ಐದು ಗಂಟೆಗೆ ವೈದ್ಯ ಬಂದು ನೋಡಿದಾಗ ಬಿಪಿ ಲೋ.
ರೋಗಿ ಉಳಿಯಲ್ಲಾ ಅಂದುಕೊಂಡು ತರಾತುರಿಯಲ್ಲಿ ಕೆಎಲ್ಇ ಆಸ್ಪತ್ರೆಗೆ ರವಾನೆ ಮಾಡಿದ್ದರು. ಕೆಎಲ್ಇ ಆಸ್ಪತ್ರೆಗೆ ಶಿಪ್ಟ್ ಮಾಡುವಾಗ ಮಾರ್ಗ ಮಧ್ಯದಲ್ಲಿ ಆರತಿ ಮೃತಪಟ್ಟಿದ್ದಾಳೆ.
ಆಸ್ಪತ್ರೆಯಲ್ಲಿ ಮೂರು ಗಂಟೆಗಳ ಕಾಲ ರೋಗಿ ನರಳಿದ್ರೂ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಆಸ್ಪತ್ರೆ, ವೈದ್ಯರ ವಿರುದ್ಧ ಆರತಿ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದರು.
ಖಡೇಬಜಾರ್ ಪೊಲೀಸ್ ಠಾಣೆ ಬಳಿ ಜಮಾವಣೆಯಾದ ಕುಟುಂಬಸ್ಥರು. ಆರತಿ ಕಳೆದುಕೊಂಡ ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ, ತಾಯಿ ಫೋಟೊ ಹಿಡಿದು ಮಕ್ಕಳ ರೋಧನೆ.
ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


