ಚಿಕ್ಕೋಡಿ : ಕಸದ ತೊಟ್ಟಿಗೆ ಗಣೇಶ ಮೂರ್ತಿ ಎಸೆದ ದುರುಳರು, ಸಾರ್ವಜನಿಕರ ಆಕ್ರೋಶ – Video
ಚಿಕ್ಕೋಡಿ: ಗಣೇಶ್ ಹಬ್ಬಕ್ಕೆ ಅತೀ ಸಂಭ್ರಮ ಗಣೇಶನನ್ನು ಬರಮಾಡಿಕೊಂಡು ಭಕ್ತಿ ಭಾವದಿಂದ ಪೂಜಿಸಿ ನಿಗದಿತ ಸಮಯಕ್ಕೆ ಸೂಕ್ತ ಸ್ಥಳದಲ್ಲಿ ವಿಸರ್ಜನೆ ಮಾಡುವುದು ಪದ್ಧತಿಯಿದೆ. ಆದರೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಗಣೇಶ ಮೂರ್ತಿಗಳನ್ನು ಕಸದ ತೊಟ್ಟಿಗೆ ಬೀಸಾಕಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸದಲಗಾ ಪಟ್ಟಣದ ಹೊರವಲಯದಲ್ಲಿ ಗಣೇಶ ಮೂರ್ತಿ ಎಸೆಯಲಾಗಿದ್ದು ಕಸದ ತೊಟ್ಟಿಯಲ್ಲಿ ಹಾಳಾದ ರೂಪದಲ್ಲಿ ಮೂರ್ತಿ ಬಿದ್ದಿವೆ. ಯಾರೋ ಗಣೇಶ ಮೂರ್ತಿ ಮಾರಾಟಗಾರರು ಈ ರೀತಿಯಲ್ಲಿ ಮೂರ್ತಿ ಎಸೆದಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಸ್ಥಳೀಯರು ವೀಡಿಯೋ ಒಂದನ್ನು ವೈರಲ್ ಮಾಡಿದ್ದು ಅದರಲ್ಲಿ ಗಣೇಶ ಮೂರ್ತಿಗಳು ಕನಸದಲ್ಲಿ ಬಿದ್ದಿವೆ. ಈ ಕುರಿತು ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.


