ಅಥಣಿಯಲ್ಲಿ ಮಳೆ ಅವಾಂತರ ; ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಸಾವು
ಅಥಣಿ : ನಸುಕಿನ ಜಾವ ದೇವರ ದರ್ಶನಕ್ಕೆಂದು ತೆರಳಿದ ವ್ಯಕ್ತಿ ಭಾರಿ ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಈಗ ಶವವಾಗಿ ಮೃತದೇಹ ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಜೇರೆಗಲ್ಲಿ ನಿವಾಸಿ ಗುರುರಾಜ ಈರಪ್ಪ ಯಾದವಾಡ (75) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಇಂದೇ ನಸುಕಿನ ಜಾವ ದೇವರ ದರ್ಶನಕ್ಕೆ ಮಸೊಬಾ ಹಳ್ಳ ದಾಟುವಾಗ ನೀರಿನ ರಭಸಕ್ಕೆ ವ್ಯಕ್ತಿ ಕೊಚ್ಚಿಹೋಗಿದ್ದು ಆಜಾದ್ ಸರ್ಕಲ್ ಬಳಿಯ ಅಗಸಿ ಹತ್ತಿರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಜರುಗಿದೆ..


