ಬಾಗಲಕೋಟೆ : ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬನ ಬಗ್ಗೆ ಯತ್ನಾಳ್ ಸೂ* ** ಎಂದು ವಿವಾದಾತ್ಮಕ ಹೇಳಿಕೆ‌ ನೀಡುವ ಇವರು ಯಾರಿಗೆ ಹುಟ್ಟಿದ್ದಾರೆ ಎಂದು ಹೇಳಲಿ ಎಂದು ಶಾಸಕ ಕಾಶಪ್ಪನವರ್ ಹರಿಹಾಯ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಇವರು. ಮತ್ತೊಬ್ಬರ ಹುಟ್ಟಿನ ಬಗ್ಗೆ ಮಾತನಾಡುವ ಇವರು ಯಾರಿಗೆ ಹುಟ್ಟಿದ್ದಾರೆ ಎಂದು ಹೇಳಲಿ. ಟಿಪ್ಪು ಸುಲ್ತಾನ್ ಗೆ ಸೂ* ಎಂದು ಹೇಳುವ ಇವರು ಯಾರ ಮಕ್ಕಳು ಎಂದು ಹೇಳಲಿ ಎಂದು ಆಕ್ರೋಶ ಹೊರಹಾಕಿದರು.

ಪವಿತ್ರ ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಇವರಿಗೆ ಸಂವಿಧಾನದ ಮೇಲೆ ಗೌರವ ಇದ್ದರೆ ಮುಚ್ಕೊಂಡು‌ ಸುಮ್ಮನೆ ಇರಬೇಕು. ಬೇರೆಯವರ ಭಾವನೆಗೆ ಧಕ್ಕೆ ಮಾಡುವ ಕೆಲಸ ಬಿಜೆಪಿಯವರು ಬಿಟ್ಟು ಹೊರಬರಲಿ ಎಂದು ಹರಿಹಾಯ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಅನೇಕರು ದೇಶಕ್ಕೆ ಪ್ರಾಣ ನೀಡಿದ್ದಾರೆ. ಇದನ್ನು ಮೊದಲು ಬಿಜೆಪಿಯವರು ತಿಳಿದುಕೊಳ್ಳಲಿ‌. ಮುಸ್ಲಿಂ ‌ಸಮುದಾಯದ ಕುರಿತು ನಾಲಿಗೆ ಹರಿಬಿಡುವುದನ್ನು‌ ನಿಲ್ಲಿಸಲಿ ಎಂದರು.