ಬಿಜೆಪಿಯಿಂದ ನನ್ನನ್ನು ಉಚ್ಚಾಟನೆ ಮಾಡ್ತಾರೆ….?
ಬೆಳಗಾವಿ : ನನ್ನನ್ನು ಹೊರ ಹಾಕುವ ಉದ್ದೇಶದಿಂದ ಅಪ್ಪ ಮಕ್ಕಳು ದೇಹಲಿಗೆ ಭೇಟಿ ನೀಡುತ್ತಾರೆ. ಆದರೆ ಹೈಕಮಾಂಡ್ ನಾಯಕರು ಅವನು ಪಂಚಮಸಾಲಿ ಸಮಾಜದ ದೊಡ್ಡ ನಾಯಕ ಎಂದು ಹೇಳಿ ವಾಪಸ್ ಕಳುಹಿಸುತ್ತಾರೆ.
ನಾನು ಬಿಜೆಪಿಯಲ್ಲಿ ಗಟ್ಟಿಯಾಗಿರಲು ಸಮಾಜವೇ ಕಾರಣ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.
ಬೆಳಗಾವಿ ನಗರದಲ್ಲಿ ಭಾನುವಾರ ನಡೆದ ಪಂಚಮಸಾಲಿ ಸಮುದಾಯದ ವಕೀಲರ ಸಮಾವೇಶದಲ್ಲಿ ಮಾತನಾಡಿದ ಇವರು. ನನ್ನನ್ನು ಬಿಜೆಪಿಯಿಂದ ಹೊರ ಹಾಕಲು ಸಾಧ್ಯವಾಗದೇ ಇರುವುದಕ್ಕೆ ಸಮಾಜದ ಜನ ನನ್ನ ಹಿಂದೆ ಇರುವುದೇ ಮೂಲ ಕಾರಣ.
ಹೈಕಮಾಂಡ್ ಬಳಿ ವಿಜಯೇಂದ್ರ ಹೋದಾಗ ಅವರು ನಾನು ಹಿಂದೂ ಪರ ಮಾತನಾಡುವ ವ್ಯಕ್ತಿ, ಸಂಬಾಳಿಸಿಕೊಂಡು ಹೋಗಲು ಹೇಳುತ್ತಾರೆ. ಯಾವುದೇ ಕಾರಣಕ್ಕೂ ನನ್ನನ್ನು ಉಚ್ಚಾಟನೆ ಮಾಡಲು ಸಾಧ್ಯವಿಲ್ಲ ಎಂದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಮಾತನಾಡಿದ ಇವರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲೇ ನಾವು ಮೀಸಲಾತಿ ಪಡೆಯಬೇಕು. ಸಮುದಾಯದ ಜನರಿಗಾಗಿ ಈ ಮೀಸಲಾತಿ ಹಮ್ಮಿಕೊಂಡಿದ್ದು
ಮಹಾರಾಷ್ಟ್ರದ ಮರಾಠಾ ಸಮುದಾಯದ ಮೀಸಲಾತಿ ಹೋರಾಟದಂತೆ ನಾವು ಹೋರಾಡಬೇಕಿದ್ದು, ನನ್ನ ಸಂಪೂರ್ಣ ಬೆಂಬಲ ಸಮುದಾಯದ ಹೋರಾಟ್ಟಕ್ಕೆ ಇದೆ ಎಂದರು.
ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದ ಒಳಗಾಗಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಬೇಕು. ಶಾಸಕರ ನಿಯೋಗ ಸಿಎಂ ಭೇಟಿ ಮಾಡಿ ಮೀಸಲಾತಿ ಬಗ್ಗೆ
ಚರ್ಚಿಸಬೇಕು.
ಸಿಎಂ ಗೆ ಕುರುಬ ಹಾಗೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು ಮನಸ್ಸು ಇಲ್ಲ. ಈ ಕುರಿತು ಹೋರಾಟ ಮುಂದುವರಿಯುತ್ತದೆ ಎಂದರು.


