Select Page

Advertisement

ಅಥಣಿ : ಕಾಲುವೆಗೆ ಕಾಲುಜಾರಿ ಬಿದ್ದು ಯುವಕ ಸಾವು

ಅಥಣಿ : ಕಾಲುವೆಗೆ ಕಾಲುಜಾರಿ ಬಿದ್ದು ಯುವಕ ಸಾವು

ಅಥಣಿ : ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವಣಪ್ಪಿದ್ದ ಘಟನೆ ಅಥಣಿ ತಾಲೂಕಿನ ಹಲ್ಯಾಳದ ಕರಿಮಸೂತಿ ಏತ ನೀರಾವರಿ ಕಾಲುವೆ ಬಳಿ ನಡೆದಿದೆ.

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಯುವಕ ಶಿವರಾಯ ಮಲ್ಲಪ್ಪ ಕಾಂಬಳೆ (21) ಮೃತ ದುರ್ದೈವಿ. ಇಬ್ಬರು ಸ್ನೇಹಿತರ ಜೊತೆಯಾಗಿ ಮುಂಜಾನೆ ಕಾಲುವೆಯ ಮೇಲೆ ಶೌಚಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಶೌಚಕ್ಕೆ ನೀರು ತರಲು ಮುಂದಾದಾಗ ಶಿವರಾಯ ಕಾಲುಜಾರಿ ಕಾಲುವೆ ಪಾಲಾಗಿದ್ದಾನೆ.

ಈಜು ಬಾರದ ಶಿವರಾಯ ರಭಸವಾಗಿ ಹರಿಯುತ್ತಿರುವ ನೀರು ಪಾಲಾಗಿದ್ದು, ಮೃತ ಯುವಕನ ಶವ ಪತ್ತೆಯಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!