ಮೆಡಿಕಲ್ ಸೀಟು ಸಿಗಲಿಲ್ಲವೆಂದು ಮನನೊಂದ ಯುವತಿ ಆತ್ಮಹತ್ಯೆ
ಕಲಬುರಗಿ : ಮೆಡಿಕಲ್ ಸಿಟ್ ಸಿಗಲಿಲ್ಲವೆಂದು ಮನನೊಂದು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಅಫಜಲಪೂರ ತಾಲೂಕಿನ ದುದ್ದಣಗಿ ಗ್ರಾಮದಲ್ಲಿ ನಡೆದಿದೆ.
ದುದ್ದಣಗಿ ಗ್ರಾಮದ ಶ್ವೇತಾ ಅಪ್ಪಾಸಾಬ ಗುಣಾರಿ (20) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ನೀಟ್ ಪರೀಕ್ಷೆ ಬರೆದರು ಸಹ ಕೂಡ ಮೇಡಿಕಲ್ ಸೀಟ್ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಯುವತಿ ಆತ್ಮಹತ್ಯೆ ಪ್ರಕರಣ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


