Select Page

Advertisement

ಪೊಲೀಸಪ್ಪನ ಕಾಟಕ್ಕೆ ಮಹಿಳೆ ಆತ್ಮಹತ್ಯೆ ಶರಣು…!

ಪೊಲೀಸಪ್ಪನ ಕಾಟಕ್ಕೆ ಮಹಿಳೆ ಆತ್ಮಹತ್ಯೆ ಶರಣು…!



ಶಿವಮೊಗ್ಗ : ಪೊಲೀಸಪ್ಪನ ಕಾಟ ತಾಳಲಾರದೆ ವಿಧವೆಯೊಬ್ಬರು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

ಸ್ವಾತಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರು ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್ ಎಂಬಾತನ ಹೆಸರು ಉಲ್ಲೇಖ ಮಾಡಿದ್ದಾರೆ.

ಕಳೆದ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ಸ್ವಾತಿ ಪತಿ ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಸಾವಣಪ್ಪಿದ್ದರು‌. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಪೊಲೀಸಪ್ಪ ಮೆಸೆಂಜರ್ ನಲ್ಲಿ ಕಾಟ ಕೊಡಲು ಪ್ರಾರಂಭಿಸಿದ್ದ.

ಕಾಟ ತಾಳಲಾರದೆ ಆತನನ್ನು ಮಹಿಳೆ ಬ್ಲಾಕ್ ಮಾಡಿದ್ದರು. ಇಷ್ಟಕ್ಕೆ ಸುಮ್ಮನಿರದ ಈತ ಬೇರೆ ಅಕೌಂಟ್ ನಿಂದ ಮಹಿಳೆ ಅಪಪ್ರಚಾರ ಮಾಡುತ್ತಿದ್ದ. ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!