Select Page

Advertisement

ಸೇವಾನಿವೃತ್ತಿ ಹೊಂದಿದ ನಿರ್ವಾಹಕ ಎಂ.ಜಿ.ಗೂಡುನವರ ಸೇರಿ ನಾಲ್ವರಿಗೆ ಬೀಳ್ಕೊಡುಗೆ

ಸೇವಾನಿವೃತ್ತಿ ಹೊಂದಿದ ನಿರ್ವಾಹಕ ಎಂ.ಜಿ.ಗೂಡುನವರ ಸೇರಿ ನಾಲ್ವರಿಗೆ ಬೀಳ್ಕೊಡುಗೆ

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ನಗರ 2ನೇ ಘಟಕದಲ್ಲಿ ಶುಕ್ರವಾರ ಸೇವಾನಿವೃತ್ತಿ ಹೊಂದಿದ ಸಿಬ್ಬಂದಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ. ರಸ್ತೆಗಳು ಈ ಹಿಂದಿನಂತೆಯೇ ಇವೆ. ಆದರೆ ಇಂದು ಟ್ರಾಫಿಕ್ ಹೆಚ್ಚಾಗಿದೆ. ಪ್ರಯಾಣಿಕರ ನಿರೀಕ್ಷೆ ಸಹ ಹೆಚ್ಚಿವೆ. ಇವೆಲ್ಲ ಒತ್ತಡಗಳ ಮಧ್ಯೆಯೂ ಚಾಲಕ-ನಿರ್ವಾಹಕರು ಯಶಸ್ವಿಯಾಗಿ ತಮ್ಮ ಸೇವೆ ಪೂರ್ಣಗೊಳಿಸಿರುವುದು ಶ್ಲಾಘನೀಯ ಎಂದರು.

ಸೇವಾನಿವೃತ್ತಿ ಹೊಂದಿದ ನಿರ್ವಾಹಕ ಎಂ.ಜಿ.ಗೂಡುನವರ ಅವರನ್ನು ಸನ್ಮಾನಿಸಿದ ಕ್ಷಣ

ಸೇವಾನಿವೃತ್ತಿ ಹೊಂದಿದ ನಿರ್ವಾಹಕರಾದ ಎಂ.ಜಿ.ಗೂಡುನವರ,‌ ಸದಾನಂದ ಬಾಗಲೆ, ಚಾಲಕರಾದ ಎಂ.ಎ.ಶೇಖ್ ಮತ್ತು ಶಕೀಲ್ ಅಹ್ಮದ್ ಹಸನವಾಲೆ ಅವರನ್ನು ಸತ್ಕರಿಸಲಾಯಿತು.

ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ.ಲಮಾಣಿ, ವಿಭಾಗೀಯ ತಾಂತ್ರಿಕ ಶಿಲ್ಪ ವಿಜಯಕುಮಾರ ಹೊಸಮನಿ, ವಿಭಾಗೀಯ ಭದ್ರತಾ ಮತ್ತು ಜಾಗೃತಾಧಿಕಾರಿ ಬಿ.ಡಿ.ಗುರಿಕಾರ,
ವಿಭಾಗೀಯ ಕಾರ್ಮಿಕ ಕಲ್ಯಾಣಾಧಿಕಾರಿ ನವೀನಕುಮಾರ, ವಿಭಾಗೀಯ ಲೆಕ್ಕಾಧಿಕಾರಿ ಸುರೇಶ ಭಜಂತ್ರಿ.

ಘಟಕ ವ್ಯವಸ್ಥಾಪಕ ಅನಂತ ಶಿರಗುಪ್ಪಿಕರ, ಮುಖಂಡರಾದ ರಾಜು ಪನ್ಯಾಗೋಳ, ಮಲ್ಲಿಕಾರ್ಜುನ ಅಂಕಲಿ, ಸಿದ್ರಾಯ ಶೀಗಿಹಳ್ಳಿ, ಸಿ.ಎಸ್.ಬಿಡ್ನಾಳ, ಈರಣ್ಣ ಸಂಗನಾಯ್ಕರ, ಮೆಹಬೂಬ್ ಮುಲ್ಲಾ, ಸಂಜಯ ಸತ್ಯನಾಯ್ಕ, ಎಸ್.ಎನ್.ಬೆಣ್ಣಿ ಇದ್ದರು‌.

Advertisement

Leave a reply

Your email address will not be published. Required fields are marked *

error: Content is protected !!