Select Page

Advertisement

ರೋಗಿಯ ಮೊಗದಲ್ಲಿ ಖುಷಿ ಮೂಡಿಸುವುದೆ ಸಾರ್ಥಕತೆ – ಡಾ. ಶಾಲಿನಿ ಕುಂದರಗಿ

ರೋಗಿಯ ಮೊಗದಲ್ಲಿ ಖುಷಿ ಮೂಡಿಸುವುದೆ ಸಾರ್ಥಕತೆ – ಡಾ. ಶಾಲಿನಿ ಕುಂದರಗಿ

ರಾಮದುರ್ಗ : ಜನರ ದೈಹಿಕ ನೋವುಗಳನ್ನು ಶಮನಗೊಳಿಸಿ, ರೋಗಿಗಳಿಗೆ ಸಂತೋಷ ಮೂಡಿಸುವಲ್ಲಿ ಸಾಧ್ಯವಿರುವ ವೈದ್ಯಕೀಯ ಶಿಕ್ಷಣ ಪೂರೈಸಿರುವುದು ನನ್ನಲ್ಲಿ ಸಾರ್ಥಕ ಭಾವ ತಂದಿದೆ ಎಂದು ಡಾ. ಶಾಲಿನಿ ಕುಂದರಗಿ ಹೇಳಿದರು.

ಸಮಗಾರ ಹರಳಯ್ಯ ಸಮಾಜದಿಂದ ಸನ್ಮಾನ ಸೀಕರಿಸಿ ಮಾತನಾಡಿ ಅವರು, ತಂದೆ ತಾಯಿ ಬಂಧು ಬಳಗದ ಅಪಾರ ಋಣ ಮತ್ತು ಶ್ರಮ ಅತ್ಯಂತ್ಯ ಮಹತ್ವದಾಗಿದೆ. ಶ್ರದ್ದೆಯಿಂದ ರೋಗಿಗಳ ಚಿಕಿತ್ಸೆ ನೀಡಿ ಅವರ ಋಣ ಸಂದಾಯ ಮಾಡುವುದಾಗಿ ಭರವಸೆ ನೀಡಿದರು.

ಹರಳಯ್ಯ ಸಮಾಜದ ಅಧ್ಯಕ್ಷ ಭರಮರಡ್ಡಿ ದೊಡಮನಿ ಮಾತನಾಡಿ, ವೈದ್ಯ ವೃತ್ತಿ ಪವಿತ್ರವಾಗಿದ್ದು, ಅದರ ಮೌಲ್ಯಗಳನ್ನು ಕಾಪಾಡಿಕೊಂಡು ಮುಂದಿನ ಪಿಳಿಗೆಗೆ ಬಳುವಳಿಯಾಗಿ ನೀಡಿಬೇಕಾಗಿರುವುದು ಇಂದಿನ ಅಗತ್ಯತೆ ಇದೆ ಎಂದ ಅವರು, ಯುವ ವೈದ್ಯರು ಹಣ ಸಂಪಾದನೆಯನ್ನೆ ಗುರಿಯನ್ನಾಗಿಸದೆ ಬಡರೋಗಿಗಳಿಗೂ ಉತ್ಮಮ ಚಿಕಿತ್ಸೆ ಲಭ್ಯವಾಗಲು ವೈದ್ಯರು ಶ್ರಮಸಬೇಕು ಎಂದು ಸಲಹೆ ನೀಡಿದರು.

ಪಟ್ಟಣದ ಹಿರಿಯ ವೈದ್ಯ ಡಾ. ವೈ.ಬಿ. ಕುಲಗೋಡ ಮತನಾಡಿ, ರೋಗಿಗಳ ಚಿಕಿತ್ಸೆ ನೀಡುವುದು ತನ್ನ ಧರ್ಮ. ಆದರೆ ಪ್ರಕೃತಿ ಮಾತ್ರ ಆರೋಗ್ಯ ನೀಡುವ ಪರಮಶಕ್ತಿ ಹೊಂದಿದೆ ಎಂಬ ಅರಿವು ವೈದ್ಯರು ಹೊಂದಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಡಾ. ಪರಶುರಾಮ ರಾಯಬಾಗ, ಚಿದಾನಂದ ದೊಡಮನಿ, ರಾಜಶೇಖರ ಶಲವಡಿ, ಪ್ರಶಾಂತ ಕಲಾದಗಿ ಹಾಗೂ ಇತರರು ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!